November 8, 2025
WhatsApp Image 2024-11-25 at 9.28.47 AM

ಮುಲ್ಕಿ: ಪಕ್ಷಿಕೆರೆ ನಿವಾಸಿ ಕಾರ್ತಿಕ್ ಭಟ್ ಆತ್ಮಹತ್ಯೆ ಹಾಗೂ ಪತ್ನಿ ಹಾಗೂ ಮಗುವಿನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರೇರಣೆ ನೀಡಿದ ಯತ್ನದಲ್ಲಿ ಗೊತ್ತಾ ಕಾರ್ತಿಕ್ ಭಟ್ ಪತ್ನಿಯ ಮನೆಯವರ ದೂರಿನ ಅನ್ವಯ ಜೈಲಿಗೆ ಹೋಗಿರುವ ಕಾರ್ತಿಕ್ ಭಟ್ ತಾಯಿ ಶ್ಯಾಮಲ ಹಾಗೂ ಸಹೋದರಿ ಕಣ್ಮಣಿ ರಾವ್ ವಿಚಾರಣೆ ಶನಿವಾರ ನಡೆದಿದ್ದು ಆರೋಪಿಗಳಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ. ಕಳೆದ ದಿನಗಳ ಹಿಂದೆ ಪಕ್ಷಿಕೆರೆ ನಿವಾಸಿ ಆರೋಪಿ ಕಾರ್ತಿಕ್ ಭಟ್ ತನ್ನ ಪತ್ನಿ ಪ್ರಿಯಾಂಕ ಹಾಗೂ ಮಗು ಹೃದಯ್ ವನ್ನು ಕೊಲೆ ಮಾಡಿ ತಾನು ಕೂಡ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ. ಬಳಿಕ ನಡೆದ ಬೆಳವಣಿಗೆಗಳಲ್ಲಿ ಪ್ರಿಯಾಂಕ ಮನೆಯವರು ನೀಡಿದ ದೂರಿನಂತೆ ಕಾರ್ತಿಕ್ ಭಟ್ ತಾಯಿ ಶ್ಯಾಮಲಾ ಹಾಗೂ ಸಹೋದರಿ ಕಣ್ಮಣಿ ವಿರುದ್ಧ ಮುಲ್ಕಿ ಪೊಲೀಸರು ಆತ್ಮಹತ್ಯೆ ಪ್ರಚೋದನೆ ಪ್ರಕರಣ ದಾಖಲಿಸಿದ್ದು, ಮೂಡಬಿದ್ರೆ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಬರೋಬ್ಬರಿ ಹದಿನೈದು ದಿನಗಳ ಬಳಿಕ ಮಂಗಳೂರಿನ ನಾಲ್ಕನೇ ಜಿಲ್ಲಾ ಸೆಶನ್ಸ್ ನ್ಯಾಯಾಲಯ ನ ಆರೋಪಿಗಳಿಗೆ ಶರತ್ತುಗಳ ಅನ್ವಯ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. ಆರೋಪಿಗಳ ಪರವಾಗಿ ಖ್ಯಾತ ವಕೀಲ ಶರತ್ ಶೆಟ್ಟಿ ವಾದಿಸಿದ್ದರು.

About The Author

Leave a Reply