ಪುತ್ತೂರು ಪರಿಸರದ ಜನರಿಗಾಗಿ ಪುತ್ತೂರಿನ ಮಾಂಯ್ ದೇ ದೇವುಸ್ ದೇವಾಲಯದ ಸಭಾಂಗಣದಲ್ಲಿ ಪ್ರಥಮ ಬಾರಿಗೆ ಜುವೆಲ್ ಗ್ರೂಪ್ ವತಿಯಿಂದ ಆಯೋಜಿಸಿರುವ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ ಮಾಹಿತಿ ಶಿಬಿರವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಇಲ್ಲಿನ ನುರಿತ ವೈದ್ಯರ ಮಾರ್ಗದರ್ಶನದಲ್ಲಿ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇದರ ಸಹಾಯಯೋಗದೊಂದಿಗೆ ಇದೇ ಡಿಸೆಂಬರ್ 1ರಂದು ನಡೆಯಲಿದೆ.ತಪಾಸಣಾ ಶಿಬಿರವು ಬೆಳಗ್ಗೆ 8: 30 ರಿಂದ ಆರಂಭಗೊಂಡು ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳಲಿದೆ.
ಶಿಬಿರದಲ್ಲಿ ಸ್ತನದ ಕ್ಯಾನ್ಸರ್ ಮುಟ್ಟಿನ ಸಮಸ್ಯೆ ಗುಣವಾಗದ ಹುಣ್ಣು ಅಜೀರ್ಣ ರಕ್ತ ಹೀನತೆ, ಮೂಳೆ ನೋವು ರಕ್ತಸ್ರಾವ ಮುಂತಾದ ಸಮಸ್ಯೆಗಳ ಕಾರಣ ಹುಡುಕುವುದು ಶಿಬಿರದ ಮುಖ್ಯ ಉದ್ದೇಶ.ಶಿಬಿರದಲ್ಲಿ ಸ್ತ್ರೀಯರ ಆರೋಗ್ಯ ಮತ್ತು ಪುರುಷರ ಆರೋಗ್ಯ ತಪಾಸಣೆ ಪ್ರತ್ಯೇಕವಾಗಿ ನಡೆಸಿ ತಜ್ಞರಿಂದ ಆರೋಗ್ಯದ ಬಗ್ಗೆ ತಿಳಿಯಲು ಅವಕಾಶವಿದೆ.ಈ ಶಿಬಿರದ ಸಂಪೂರ್ಣ ಪ್ರಾಯೋಜನವನ್ನು ಪರಿಸರದ ಎಲ್ಲರೂ ಪಡೆಯಬೇಕಾಗಿ ಎಂದು ಆಯೋಜಕರು ತಿಳಿಸಿದ್ದಾರೆ.