August 30, 2025
WhatsApp Image 2024-11-26 at 5.32.04 PM

ಜಿಲ್ಲೆಯ ವಿವಿಧ ಗ್ರಾ.ಪಂಚಾಯತಿಗೆ ಕಾರಣಾಂತರಗಳಿಂದ ತೆರವಾದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಭೂತಪೂರ್ವ ಜಯಗಳಿಸುವ ಮೂಲಕ ಕಾಂಗ್ರೇಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಗ್ರಾಮದ ಹಳ್ಳಿಯ ಪ್ರದೇಶದ ಮೂಲೆಮೂಲೆಯಲ್ಲೂ ಬಿಜೆಪಿಗೆ ಠಕ್ಕರ್ ನೀಡಿ ಕೈ ಪಕ್ಷಕ್ಕೆ ಜೈ ಎಂದಿದ್ದಾರೆ,ಇದಕ್ಕೆ ದ.ಕನ್ನಡ ಜಿಲ್ಲೆಯಾದ್ಯಂತ ನಡೆದ ಉಪಚುನಾವಣೆಯ ಪಲಿತಾಂಶವೇ ನಿದರ್ಶನ ಎಂದು ಈ ಗ್ರಾ.ಪಂಚಾಯತ್ ಉಪಚುನಾವಣೆಯ ಉಸ್ತುವಾರಿ ಸಂಚಾಲಕರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ತಿಳಿಸಿದರು.ನನಗೆ ಜಿಲ್ಲಾದ್ಯಕ್ಷರಾದ ಹರೀಶ್ ಕುಮಾರ್ ಉಪಚುನಾವಣೆಯ ಜವಾಬ್ದಾರಿ ನೀಡಿದ ನಂತರ ಜಿಲ್ಲೆಯ ಪ್ರತಿ ಚುನಾವಣಾ ನಡೆಯುವ ಗ್ರಾಮದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಆಯಾ ಬ್ಲಾಕ್ ಅಧ್ಯಕ್ಷರುಗಳೊಂದಿಗರ ಸ್ಥಳೀಯ ಮುಖಂಡರ ಜೊತೆ ಬೇಟಿಯಾಗಿ ಅವರಿಗೆ ಪ್ರೋತ್ಸಾಹದೊಂದಿಗೆ ದೈರ್ಯ ತುಂಬುವ ಕೆಲಸವನ್ನು,ರೂಪರೇಷೆಗಳನ್ನು ಮಾಡಿದ್ದೇವೆ.ನಮ್ಮ ಸರಕಾರದ ಯೋಜನೆಗಳು,ಅಭಿವೃದ್ಧಿಗಳು,ಪಂಚಾಯತ್ ರಾಜ್ ವ್ಯವಸ್ಥೆಯ ಕಾಂಗ್ರೆಸ್ ಕೊಡುಗೆಗಳನ್ನು ಮತದಾರರಿಗೆ ಮನವರಿಕೆ ಮಾಡಿದ್ದು ಮತದಾರರು ನಮ್ಮ “ಕೈ” ಹಿಡಿಯುವವಲ್ಲಿ ಸಹಕರಿಸಿದ್ದಾರೆ ನಾವು ಕೂಡ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.ಮತದಾನ ನಡೆಯುವ ಸಂದರ್ಭದಲ್ಲೂ ಪ್ರತಿ ಮತಗಟ್ಟೆಗೆ ಬೇಟಿ ನೀಡಿ ಅಭ್ಯರ್ಥಿಗಳಿಗೆ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸುವಂತೆ ಪ್ರೇರೇಪಿಸಿದ್ದು ಅವರೊಂದಿಗೆ ನಿಕಟ ಸಂಪರ್ಕ,ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ್ದು ಕೂಡ ಹೆಚ್ಚಿನ ಅಂತರದಿಂದ ಗೆಲ್ಲಲು ಸಾದ್ಯವಾಗಿದೆ ಎಂದರು.


ಜಿಲ್ಲೆಯ 31 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 23 ಕಾಂಗ್ರೆಸ್,7 ಬಿಜೆಪಿ ಗೆದ್ದಿದ್ದು,ಒಂದು ಸ್ಥಾನಕ್ಕೆ ಚುನಾವಣೆ ನಡೆಯದೆ ತಟಸ್ಥವಾಗಿದೆ,ಅಲ್ಲದೆ ನಮ್ಮ ಪರಾಜಿತ ಅಭ್ಯರ್ಥಿಗಳು ಸಂಘಟಿತ ಪೈಪೋಟಿ ನೀಡಿದ್ದು 7 ಅಭ್ಯರ್ಥಿಗಳ ಮತಗಳಿಗೆ ಗೆಲುವಿನ ಹತ್ತಿರವಿದ್ದು ಕ್ಲೀನ್ ಸ್ವೀಪ್ ಆಗುವ ಸಂಭವವಿತ್ತು ಮತ್ತು ಅಲ್ಪ ಅಂತರದ ಸೋಲಾಗಿದೆ ಎಂದರು ಈ ಸಂದರ್ಭದಲ್ಲಿ ತಿಳಿಸಿದರು.ಬಿಜೆಪಿ,SDPI ಸದಸ್ಯರಿದ್ದ ಹಲವು ಸ್ಥಾನಗಳನ್ನು ಕಸಿದು ನಮ್ಮ ಐತಿಹಾಸಿಕ‌ ಸಾದನೆಯಾಗಿದೆ ಎಂದರು.

ಈ ಗೆಲುವಿನ ರೂವಾರಿಗಳಾಗಿ ಶ್ರಮಿಸಿದ ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ,ಜಿಲ್ಲೆಯಾದ್ಯಕ್ಷರಾದ ಹರೀಶ್ ಕುಮಾರ್,ಕೆ.ಪಿ.ಸಿ.ಸಿ.ಕಾರ್ಯದ್ಯಕ್ಷರಾದ ಮಂಜುನಾಥ ಭಂಡಾರಿ,ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ,ಐವನ್ ಡಿ.ಸೋಝಾ,ಅಭಯ ಚಂದ್ರ ಜೈನ್ ,ಮಿಥುನ್ ರೈ,ಬೆಳ್ತಂಗಡಿಯ ರಕ್ಷಿತ್ ಶಿವರಾಂ,ಮಂಗಳೂರು ಉತ್ತರದ ಇನಾಯತ್ ಅಲಿ,ಸುಳ್ಯದ ಕೃಷ್ಣಪ್ಪ,ಮಂಗಳೂರು( ಉಳ್ಳಾಲ) ಮುಖಂಡರು ಸೇರಿದಂತೆ ಎಲ್ಲಾ ಬ್ಲಾಕ್ ಅದ್ಯಕ್ಷರುಗಳು,ಮುಂಚೂಣಿ ಘಟಕದ ಅದ್ಯಕ್ಷರುಗಳು,ಕಾರ್ಯಕರ್ತರು,ಬೂತ್ ಅದ್ಯಕ್ಷರುಗಳ ಪರಿಶ್ರಮ ನಮ್ಮ ಗೆಲುವಿಗೆ ಸಹಕಾರಿಯಾಗಿದೆ ಎಂದು ಅವರ ತ್ಯಾಗದ ಕೊಡುಗೆಗಳನ್ನು ನೆನಪಿಸಿಕೊಂಡರು.

ಅಭೂತಪೂರ್ವ ಗೆಲವು ಸಾದಿಸಿದ ಅಭ್ಯರ್ಥಿಗಳನ್ನು ಮತ ಎಣಿಕೆ ಕೇಂದ್ರಗಳಲ್ಲಿ ಬೇಟಿಯಾಗಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಕಾನೂನುಗಳನ್ನು ತಿಳಿಯಲು “ಜನಾದೀಕಾರ” ಎಂಬ ಪುಸ್ತಕವನ್ನು ನೀಡಿ ಶಾಲು ಹೊದಿಸಿ ಅರ್ಥಪೂರ್ಣವಾಗಿ ಅಭಿನಂದನೆ ಸಲ್ಲಿಸಲಾಯಿತು. ಗೆದ್ದ ಅಭ್ಯರ್ಥಿಗಳಿಗೆ ಹಾಗೂ ಸ್ಪರ್ದಿಸಿ ಪೈಪೋಟಿ ನೀಡಿದ ಅಭ್ಯರ್ಥಿಗಳಿಗೂಅಭಿನಂದನೆ ಸಲ್ಲಿಸಲಾಯಿತು.

About The Author

Leave a Reply