
ಮಂಗಳೂರು : ಮಂಗಳೂರು ನಗರದಲ್ಲಿ ಬುಧವಾರ ರಾತ್ರಿ ಜೀಪೊಂದು ಏಕಾಏಕಿ ಬೆಂಕಿಗಾಹುತಿಯಾಗಿದೆ. ನಗರದ ಫಳ್ಳೀರ್ ಸ್ಟರಕ್ ರಸ್ತೆಯಲ್ಲಿ ರಾತ್ರಿ ಸುಮಾರು 9.30 ರ ಹೊತ್ತಿಗೆ ಈ ಘಟನೆ ನಡೆದಿದ್ದು, ಯಾವುದೇ ಜೀವಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.



ಸ್ಥಳೀಯ ಚಿನ್ನಾಭರಣ ಮಳಿಗೆಗೆ ಸೇರಿದ ಮಹೀಂದ್ರಾ ಬೊಲೇರೋ ಜೀಪ್ ಇದಾಗಿದ್ದು ಬೆಂಕಿ ಹೊತ್ತಿಕೊಂಡ ತಕ್ಷಣ ಅದರಲ್ಲಿದ್ದ ಪ್ರಯಾಣಿಕರು ಹೊರಗೆ ಬಂದಿದ್ದಾರೆ. ಅಗ್ನಿ ಅವಘಡದ ಮಾಹಿತಿ ಪಡೆದ ಪಾಂಡೇಶ್ವರ ಅಗ್ನಿಶಾಮಕ ದಳ ಧಾವಿಸಿ ಬಂದು ಬೆಂಕಿಯನ್ನು ನಂದಿಸಿದೆ. ಆದ್ರೆ ಜೀಪು ಸಂಪೂರ್ಣ ಸುಟ್ಟು ಹೋಗಿದೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.