
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲರು ಎಂಬುದಾಗಿಯೇ ಹೇಳಲಾಗುತ್ತಿದ್ದಂತ ಆರು ನಕ್ಸಲರು ಶರಣಾಗತಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಮೂಲಕ ಕಾಡು ತೊರೆದು, ನಾಡಿಗೆ ಬರಲು ನಿರ್ಧರಿಸಿದ್ದಾರೆ.



ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೋಸ್ಟ್ ವಾಂಟೆಂಡ್ ಆರು ನಕ್ಸಲರು ಜಿಲ್ಲಾಡಳಿತ ಮುಂದೆ ಶರಣಾಗಲು ನಿರ್ಧರಿಸಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಶಾಂತಿಗಾಗಿ ನಾಕರಿಕ ವೇದಿಗೆಕೆ ಪತ್ರವನ್ನು ಕೂಡ ನಕ್ಸರು ಬರೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ಹೊರಟಿರುವಂತ ಆರು ನಕ್ಸಲರು ಕರ್ನಾಟಕ, ಕೇರಳ, ಆಂಧ್ರಪ್ರದೇಶದಲ್ಲಿನ ಮೋಸ್ಟ್ ವಾಂಟೆಂಡ್ ನಕ್ಸಲರಾಗಿದ್ದಾರೆ.
ಯಾರು ಯಾರು ನಕ್ಸಲರು ಶರಣಾಗಲು ನಿರ್ಧಾರ.?
ಕರ್ನಾಟಕದಲ್ಲಿ ಮೋಸ್ಟ್ ವಾಂಟೆಂಡ್ ನಕ್ಸಲ್ ಎಂದೇ ಕರೆಸಿಕೊಳ್ಳುವಂತ ತುಂಗಾ ದಳದ ನಾಯಕಿ ಮುಂಡಗಾರು ಲತಾ, ಸುಂದರಿ, ನತಾಕಿ, ದಕ್ಷಿಣ ಭಾರತದ ಮೋಸ್ಟ್ ವಾಂಟೆಂಡ್ ನಕ್ಸಲ್ ಜೀಶಾ, ಆಂಧ್ರಪ್ರದೇಶದ ಕೆ. ವಸಂತ, ಮಾರೆಪ್ಪ ಆರೋಲಿ ಎಂಬುವರು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ.