
ಮಂಗಳೂರು: ಗದ್ದೆಗೆ ಕ್ರಿಮಿನಾಶಕ ಸಿಂಪಡಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಕಿನ್ನಿಗೋಳಿ ಸಮೀಪದ ಏಳಿಂಜೆ ಎಂಬಲ್ಲಿ ಸಂಭವಿಸಿದೆ.



ಮೃತರನ್ನು ಪಟ್ಟೆ ಮಾಗಂದಡಿ ನಿವಾಸಿ ಅಶೋಕ್ ಶೆಟ್ಟಿ(60) ಎಂದು ಗುರುತಿಸಲಾಗಿದೆ.
ಕುಸಿದು ಬಿದ್ದ ಅಶೋಕ್ ಅವರನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.