October 28, 2025
WhatsApp Image 2025-01-06 at 10.30.47 AM
ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಮಹಿಳೆ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ ಪೆರಂಪಳ್ಳಿಯ ಅರ್ಪಾಟ್‌‌ಮೆಂಟ್‌‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿನ್ವಯ ದಾಳಿ ನಡೆಸಿದ ಮಣಿಪಾಲ ಠಾಣೆಯ ಪಿ.ಐ ದೇವರಾಜ್‌ ಟಿ.ವಿ ನೇತೃತ್ವದಲ್ಲಿ ಪಿಎಸ್‌ಐ ಅನೀಲ್‌, ಎಎಸ್‌ಐ ವಿವೇಕ್‌ ಹಾಗೂ ಸಿಬ್ಬಂದಿಗಳಾದ ವಿದ್ಯಾ, ಇಮ್ರಾನ್‌, ಪ್ರಸನ್‌, ಮಂಜುನಾಥ ರವರನ್ನೊಳಗೊಂಡ ತಂಡ ದಾಳಿ ಮಾಡಿ ರಘುನಂದನ್‌ (40) ಕೊಪ್ಪ ಚಿಕ್ಕಮಗಳೂರು ಜಿಲ್ಲೆ ಹಾಗೂ ಅಮೀನಾ ಬೇಗಂ (55) ಹರಿಹರ, ದಾವರಣಗೆರೆ ಜಿಲ್ಲೆ ಇವರನ್ನು ಬಂಧಿಸಿದ್ದಾರೆ.
ಆರೋಪಿಗಳು ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ ಬೆಂಗಳೂರು ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ಹಾಸನ ಜಿಲ್ಲೆಯ ಹಿರೀಸಾವೆ ಗ್ರಾಮದ ರವೀಶ್‌ ಎಂಬ ಆರೋಪಿ ಬಂಧನಕ್ಕೆ ಮಣಿಪಾಲ ಠಾಣಾ ಪಿ.ಐ ದೇವರಾಜ್‌ ಟಿ ವಿ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

About The Author

Leave a Reply