November 28, 2025
THSHJ

ಶಾರ್ಜಾ :ಯುನೈಟೆಡ್ ಅರಬ್ ಎಮಿರೇಟ್ಸ್ ನ ಪ್ರತಿಷ್ಠಿತ ಸಂಸ್ಥೆಯಾದ ತುಂಬೆ ಮೆಡಿಕಲ್ ಕಾಲೇಜ್ ಸಂಸ್ಥೆಯು ಶಾರ್ಜಾದಲ್ಲಿ ನೂತನವಾಗಿ ಸೈಕ್ಯಾಟ್ರಿಕ್ ಮತ್ತು ರಿಹಾಬಿಲೇಷನ್ ಕೇಂದ್ರವನ್ನು ಸ್ಥಾಪಿಸುವ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದು 2025 ಜೂನ್ ತಿಂಗಳಲ್ಲಿ ಇದರ ಕಟ್ಟಡ ಕಾಮಗಾರಿ ಪ್ರಾಂಭಗೊಂಡು 2026 ಕ್ಕೆ ಸೇವೆಯನ್ನು ಪ್ರಾಂಭಿಸಲಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ ತುಂಬೆ ಮೊಯಿದಿನ್ ತಿಳಿಸಿದ್ದಾರೆ.

ಮೊದಲ ಹಂತದಲ್ಲಿ 60 ಹಾಸಿಗೆಯೊಂದಿಗೆ ಪ್ರಾರಂಭವಾಗುವ ಈ ಕೇಂದ್ರದಲ್ಲಿ ಸೈಕ್ಯಾಟ್ರಿಕ್ ಕೇರ್ ,ಹೊರರೋಗಿ ಮತ್ತು ಒಳರೋಗಿ ವಿಭಾಗ ,ಡಯಾಗ್ನಸೀಸ್ ಚಿಕಿತ್ಸೆ ,ಥೆರೆಪಿಕ್ ಇಂಟರ್ವೆನ್ಷನ್ ,ರಿಹಾಬಿಲೇಷನ್ ಸರ್ವಿಸ್ ,ಸಬ್ ಸ್ಟಾನ್ಸ್ ಅಬಿಯೂಸ್ ರಿಹಾಬಿಕೇಷನ್ ,ಅಲ್ಪ ಕಾಲ ಮತ್ತು ದೀರ್ಘ ಕಾಲ ರೋಗಿಗಳಿಗೆ ಸುಸಜ್ಜಿತ ವಿಶ್ರಾಂತಿ ಗೃಹ ,ಸ್ವಿಮ್ಮಿಂಗ್ ಪೂಲ್ ಮತ್ತು ಸ್ಪಾ ,ಸನಿಹದಲ್ಲೇ ತುಂಬೇ ಮಸೀದಿ ,ಮುಂತಾದ ಎಲ್ಲಾ ಸೌಕರ್ಯ ಒದಗಿಸಲಾಗುವುದು ಎಂದೂ ಡಾ ತುಂಬೆ ಮೊಯ್ದಿನ್ ತಿಳಿಸಿದ್ದಾರೆ .
ಶಾರ್ಜಾ ಹೆಲ್ತ್ ಅಥಾರಿಟಿ ಮತ್ತು ಶಾರ್ಜಾ ಹೆಲ್ತ್ ಕೇರ್ ಇದರ ಮುಖ್ಯಸ್ಥ ರಾದ ಡಾ ಅಬ್ದುಲ್ ಅಝೀಜ್ ಅಲ್ ಮೆಯಿರಿ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು.

ಕರಾವಳಿ ಭಾಗದ ಪ್ರಸಿದ್ಧ ಉದ್ಯಮಿಯಾಗಿದ್ದ ತುಂಬೆ ಅಹಮದ್ ಹಾಜಿಯವರ ಸುಪತ್ರ ರಾಗಿರುವ ಡಾ ತುಂಬೆ ಮೊಯಿದಿನ್ ರವರ ಈ ಸಾಧನೆಗೆ ವ್ಯಾಪಕವಾದ ಪ್ರಶಂಸೆ ಎಲ್ಲೆಡೆ ವ್ಯಕ್ತವಾಗಿದೆ .

About The Author

Leave a Reply