ವಿಟ್ಲ: ಕೊಳ್ನಾಡು ಈಡಿ,ಐಟಿ ಅಧಿಕಾರಿಗಳ ಸೋಗಿನಲ್ಲಿ ಸಿಂಗಾರಿ ಬೀಡಿ ಮಾಲೀಕರ ಮನೆಗೆ ದಾಳಿ ದರೋಡೆ ಪ್ರಕರಣ; ಗೃಹ ಸಚಿವ ಡಾ.ಜಿ.ಪರಮೇಶ್ವರ್,ಪಶ್ಚಿಮ ವಲಯ ಐ.ಜಿ.ಪಿ.,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾಜಿ ಸಚಿವರಾದ ಶ್ರೀ. ಬಿ.ರಮನಾಥ ರೈ ಮಾತುಕತೆ ಶೀಘ್ರ ಪತ್ತೆಗಾಗಿ ಮನವಿ
ಇತ್ತೀಚೆಗೆ ಸಿಂಗಾರಿ ಬೀಡಿ ಮಾಲೀಕರು,ಉದ್ಯಮಿ,ಕೊಡುಗೈ ದಾನಿ, ಸಮಾಜಿಕ ಮುಖಂಡರಾದ ಸುಲೈಮಾನ್ ಹಾಜಿ ಅವರ ಮನೆಗೆ ತಮಿಳುನಾಡು ನೊಂದಣಿ ಕಾರಿನಲ್ಲಿ ಆಗಮಿಸಿ ಅಧಿಕಾರಿಗಳೆಂದು ನಂಬಿಸಿ ಮೋಸದಿಂದ ದರೋಡೆ ನಡೆಸಿದ ಪ್ರಕರಣದ ಮನೆಗೆ ಮಾಜಿ ಸಚಿವರಾದ ಶ್ರೀ. ಬಿ.ರಾಮನಾಥ ರೈ ಸಾಂತ್ವನದ ಬೇಟಿ ನೀಡಿದರು.
ನಂತರ ಗೃಹ ಸಚಿವರೊಂದಿಗೆ ಪೋಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತಾಡಿ ಇಂತಹ ಘಟನೆ ನನ್ನ ವಿಧಾನ ಸಭಾ ವ್ಯಾಪ್ತಿಯಲ್ಲಿ ಪ್ರಥಮವಾಗಿದೆ,ಮುಂದಿನ ದಿನಗಳಲ್ಲಿ ದರೋಡೆಕೋರರಿಗೆ ರಹದಾರಿಯಾಗಿದೆ ಇದನ್ನು ಮಟ್ಟ ಹಾಕುವಲ್ಲಿ ಪೋಲಿಸರು ಕಾರ್ಯಚರಿಸಬೇಕೆಂದು ದಿಗ್ಬ್ರಮೆ ವ್ಯಕ್ತಪಡಿಸಿದರು.ಕುಟುಂಬದ ಸದಸ್ಯರಿಗೆ ಯಾವುದೇ ಕಾರಣಕ್ಕೂ ಮಾನಸಿಕವಾಗಿ, ದೈಹಿಕವಾಗಿ ದೃತಿಗೆಡದಂತೆ ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ದೈರ್ಯ ತುಂಬಿದರು.ನೂರಾರು ಕುಟುಂಬಗಳಿಗೆ ಅನ್ನದಾತರಾಗಿರುವ,ಇದನ್ನೆ ನಂಬಿರುವ ಕುಟುಂಬಗಳಿಗೆ ಬೀಡಿ ಉದ್ದಿಮೆಗೆ ನಷ್ಟ ತರಿಸುವ ದರೋಡೆಕೋರರಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷರಾದ ಅಶ್ರಪ್ ಕೆ ಸಾಲೆತ್ತೂರು, ಬೊಳಂತೂರು ಗ್ರಾ.ಪಂಚಾಯತ್ ಸದಸ್ಯರಾದ ಚಂದ್ರಶೇಖರ ರೈ,ಹಸೈನಾರ್ ತಾಳಿತ್ತನೂಜಿ ಕುಟುಂಸ್ಥರು ಉಪಸ್ಥಿತರಿದ್ದರು