October 24, 2025
WhatsApp Image 2025-01-09 at 11.17.43 PM

ಕಾಸರಗೋಡು : ಸ್ನೇಹ ಸ್ಪರ್ಶಂ ಟೈಲ್ಸ್ ವರ್ಕರ್ಸ್ ಚಾರಿಟೇಬಲ್ ಕಾಸರಗೋಡು ಇದರ ವಾರ್ಷಿಕ ಮಹಾಸಭೆಯು 29/12/2024 ಆದಿತ್ಯವಾರದಂದು ಬೋವಿಕ್ಕಾನ ವ್ಯಾಪಾರ ಭವನದಲ್ಲಿ ರಫೀಕ್ ಬೆದ್ರಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಳೆದ ಒಂದು ವರ್ಷದಲ್ಲಿ ನಿರ್ವಹಿಸಿದ ಕಾರ್ಯಕ್ರಮಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಮೊದಲ ಮ್ಯಾಗಸೀನ್‌ ಅನ್ನು ಸ್ಟಾರ್ ಫ್ರೀಜೋನ್ ಸಂಸ್ಥೆಯ ಮಾಲಕರಾದ ಮನ್ಸೂರ್ ಅವರಿಗೆ ಹಸ್ತಾಂತರಿಸುವುದರ ಮೂಲಕ ಬಿಡುಗಡೆ ಮಾಡಲಾಯಿತು.ಚಾರಿಟಿಯ ಮುಖಾಂತರ ನಡೆದ ಕಾರ್ಯವೈಖರಿಗಳ ವಾರ್ಷಿಕ ವರದಿಯನ್ನು ಚಾರಿಟಿ ಕಾರ್ಯದರ್ಶಿಯಾದ ಶಾಫಿ ಪಲ್ಲಂ ವಾಚಿಸಿದರು.

ಪ್ರಸ್ತುತ ಕಾರ್ಯಕಾರಿ ಸಮಿತಿಯ ನಾಯಕರ ಅಧಿಕಾರಾವಧಿಯನ್ನು ಚದುರಿಸಿ ನೂತನ ನಾಯಕರನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.2025-26ನೇ ಸಾಲಿನ ಅಧ್ಯಕ್ಷರಾಗಿ ರಫೀಕ್ ಬೆದ್ರಾ ಹಾಗೂ ಕಾರ್ಯದರ್ಶಿಯಾಗಿ ಶಾಫಿ ಪಲ್ಲಂ ರವರು ಪುನರಾಯ್ಕೆಯಾದರು.

ಉಪಾಧ್ಯಕ್ಷರಾಗಿ ಸುಜಿತ್ ನಾಯಿಕಾಪ್ , ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಪವೈಲ್ , ಕೋಶಾಧಿಕಾರಿಯಾಗಿ ಅಕ್ಬರ್ ಮಂಜತ್ತಡ್ಕ , ರಕ್ಷಾಧಿಕಾರಿಗಳಾಗಿ ಸುರೇಶ್ ಅಟ್ಟಂಗಾನ ಮತ್ತು ಹಕೀಂ ನಾರಂಪಾಡಿ , ಕಾರ್ಯಕಾರಿ ಸದಸ್ಯರಾಗಿ ಸತೀಶ್ ಬೆವಿಂಜ , ರಹೀಂ ನೆಲ್ಲಿಕಟ್ಟೆ ಮತ್ತು ಖಲೀಲ್ ಕೆಟ್ಟುಂಗಲ್ , ಚಾರಿಟಿ ಪ್ರವರ್ತಕರಾಗಿ ಸುರೇಶ್ ಮೇಲ್ಪರಂಬು ಮತ್ತು ಖಾದರ್ ಭೋವಿಕ್ಕಾನ ,ಮಾಧ್ಯಮ ಪ್ರವರ್ತಕರಾಗಿ ಮಸೂದ್ ಸಂಟ್ಯಾರ್ ಆಯ್ಕೆಯಾದರು.

About The Author

Leave a Reply