
ಮಂಗಳೂರು: ಮೆಸ್ಕಾಂ ಉದ್ಯೋಗಿ ಯಾಗಿದ್ದ ರಘು ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತ ಪಟ್ಟ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ನಲ್ಲಿ ಮೆಸ್ಕಾಂ ಉದ್ಯೋಗಿಗಳ ಖಾತೆಹೊಂದಿದ್ದ ಬ್ಯಾಂಕ್ ಗ್ರಾಹಕ ರಘು ಅವರ ಕುಟುಂಬದ ನಾಮ ನಿರ್ದೇಶಿತರಾದ ದಮಯಂತಿಯ ವರಿಗೆ ಕೆನರಾ ಬ್ಯಾಂಕ್ ಗ್ರಾಹಕ ಅಪಘಾತ ವಿಮಾ ಯೋಜನೆಯ ಮೊತ್ತ ರೂ.60ಲಕ್ಷ ರೂ ನೀಡಿದೆ.



ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್ ಹಾಗೂ ಕೆನರಾ ಬ್ಯಾಂಕ್ ನ ಮಂಗಳೂರು ವೃತ್ತ ಕಚೇರಿಯ ಡಿಜಿಎಂ ಶೈಲೇಂದ್ರ ನಾಥ್ ಶೇಟ್ ರೂ.60 ಲಕ್ಷದ ಚೆಕ್ ನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ರೀಜನ್ ಆಫೀಸಿನ ಮುಖ್ಯಸ್ಥ ಉಮಾಶಂಕರ್ ಪ್ರಸಾಧ್ ಮೊದಲಾದವರು ಉಪಸ್ಥಿತರಿದ್ದರು.