
ಉಳ್ಳಾಲ : ಇಲ್ಲಿನ ಮಂಜನಾಡಿಯ ಖಂಡಿಗ ಗ್ರಾಮದಲ್ಲಿ ಸಿಲಿಂಡರ್ ಸ್ಪೋಟಗೊಂಡು ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟ ತಾಯಿ-ಮಕ್ಕಳ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಶನಿವಾರ ಸಂಜೆ 15ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು. ಘಟನೆಯಲ್ಲಿ ತಾಯಿ ಖತೀಜತ್ತುಲ್ ಖುಬ್ರ ಹಾಗೂ ಇಬ್ಬರು ಪುತ್ರಿಯರಾದ ಝಲೈಕಾ ಮೆಹ್ದಿ, ಸಲ್ಮಾ ಮಝಿಯಾ ಮೃತಪಟ್ಟಿದ್ದರು. ಮೃತಪಟ್ಟ ಮೂವರಿಗೆ ತಲಾ 5ಲಕ್ಷ ರೂ. ಚೆಕ್ ಅನ್ನು ಕುಟುಂಬದ ಸದಸ್ಯರಿಗೆ ಸಿಎಂ ನೀಡಿದರು.


