ಮಲ್ಪೆ: ಕಾರಿನ ಗಾಜು ಹೊಡೆದು ಕಳ್ಳತನ ನಡೆಸಿರುವ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕಿಕಟ್ಟೆ ಮೂಲದ ಪ್ರವಾಸಿಗರು ಮಲ್ಪೆ ಬೀಚ್ ಗೆ ಹೊರಟು ರಾತ್ರಿ 7:15 ಗಂಟೆಗೆ ಮಲ್ಪೆ ಗಾಂಧಿ ಶತಾಬ್ದಿ ಶಾಲೆಯ ಮೈದಾನದಲ್ಲಿ ಕಾರನ್ನು ನಿಲ್ಲಿಸಿ ಕಾರಿನ ಒಳಗೆ ಬ್ಯಾಗಿನಲ್ಲಿ ಮೊಬೈಲ್ ಮತ್ತು ನಗದು 20,000/- ರೂಪಾಯಿ ಮತ್ತು ಎ.ಟಿ.ಎಂ ಕಾರ್ಡ್ ನ್ನು ಇಟ್ಟು ಕಾರು ಲಾಕ್ ಮಾಡಿ ಮಲ್ಪೆ ಬೀಚ್ ಗೆ ಹೋಗಿದ್ದಾರೆ.
ಬಳಿಕ ರಾತ್ರಿ 8:30 ಗಂಟೆಗೆ ಕಾರಿನ ಬಳಿ ಬಂದು ನೋಡಿದಾಗ ಕಾರಿನ ಮದ್ಯ ಸೀಟಿನ ಬಲ ಭಾಗದ ಸಣ್ಣ ಗ್ಲಾಸ್ ಒಡೆದಿರುವುದನ್ನು ಕಂಡು ಕಾರಿನ ಒಳಗೆ ಹೋಗಿ ನೋಡಿದಾಗ ಕಾರಿನ ಒಳಗೆ ಇಟ್ಟಿದ್ದ ಬ್ಯಾಗ್ ಇರಲಿಲ್ಲ.
ಯಾರೋ ಕಳ್ಳರು ಕಾರಿನ ಗ್ಲಾಸನ್ನು ಒಡೆದು ಕಾರಿನ ಒಳಗೆ ಬ್ಯಾಗಿನಲ್ಲಿ ಇಟ್ಟಿದ ಮೊಬೈಲ್ ಹಾಗೂ ನಗದು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.