August 30, 2025
WhatsApp Image 2025-01-16 at 9.53.01 PM

ಕಡಬ: ಪೌರಾಣಿಕ ಮತ್ತು ಅತ್ಯಂತ ಚರಿತ್ರೆ ಪ್ರಸಿದ್ಧವಾದ ಬೈತಡ್ಕ ದರ್ಗಾ ಶರೀಫ್ ಮತ್ತು ಜುಮ್ಮಾಮಸ್ಜಿದ್_ ಬೈತಡ್ಕ ಎಂಬ ಪ್ರದೇಶವು ಹಲವಾರು ದಶಕಗಳಿಂದ ಪಳ್ಳಿದರ್ಸಿಗೆ ಅತ್ಯಂತ ಪ್ರಸಿದ್ಧವಾಗಿದೆ.

ಧಾರ್ಮಿಕ ವಿದ್ವಾಂಸರ ನೇತೃತ್ವದಲ್ಲಿ ದರ್ಸ್ ಅಧ್ಯಯನ ಅಚಲವಾದ ಬದ್ಧತೆಯಿಂದ ಅಸ್ತಿತ್ವದಲ್ಲಿದೆ. ಇಲ್ಲಿಂದ ಮೌಲ್ಯಯುತವಾದ ಜ್ಞಾನಾರ್ಜನೆ ಮಾಡಿದ ಮುತಲ್ಲಿಮ್ ವಿದ್ವಾಂಸರು ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಈ ದೀನಿ ವಿದ್ಯಾ ಕೇಂದ್ರಕ್ಕೆ ಸ್ಪೂರ್ತಿದಾಯಕವಾಗಿದೆ.

ಈ ಪ್ರದೇಶದಲ್ಲಿ ನೆಲೆಗೊಂಡಿರುವ ದರ್ಗಾ ಶರೀಫ್ ದಕ್ಷಿಣ ಕನ್ನಡ ಜಿಲ್ಲೆಯ ಆಧ್ಯಾತ್ಮಿಕ ಝಿಯಾರತ್ ಕೇಂದ್ರಗಳಲ್ಲಿ ಒಂದಾಗಿರುವುದು ಹಾಗೂ ಸರ್ವ ಧರ್ಮೀಯರೂ ಬದುಕಿನ ನೋವು, ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಇಲ್ಲಿಗೆ ತಲುಪುತ್ತಿದ್ದಾರೆ.. ಐದು ವರ್ಷಕ್ಕೊಮ್ಮೆ ನಡೆಯುವ ಉದಯಾಸ್ತಮಾನ ಉರೂಸ್ ಉತ್ಸಾಹಭರಿತ ಪ್ರಸಿದ್ಧಿ ಪಡೆದಿದೆ. ಪ್ರತಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಆಧ್ಯಾತ್ಮಿಕ ಮಜ್ಲಿಸ್ ಗಳ ಪೈಕಿ ಶ್ರೇಷ್ಠವಾಗಿರುವ ಸ್ವಲಾತುಲ್ ಕಫೀಲಿ ಬಿಶ್ಯಫಾಹ ಎಂಬ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರ ಹೆಸರಿನ ಮಹತ್ತರವಾದ ಸ್ವಲಾತ್ ಮಜ್ಲಿಸ್ ನಡೆಸಲಾಗುತ್ತದೆ.

04/02/25 ಹಾಗೂ 05/02/25 ರಂದು ಧಾರ್ಮಿಕ ಮತ ಪ್ರಭಾಷಣ ಹಾಗೂ 36ನೇ ಸ್ವಲಾತ್ ವಾರ್ಷಿಕವೂ 06/02/2025 ರಂದು ಮಗ್ರಿಬ್ ನಮಾಝಿನ ಬಳಿಕ ಸ್ವಲಾತ್,ದುವಾ ಮಜ್ಲಿಸ್ ಹಾಗೂ ಸಮಾರೋಪ ಸಮಾರಂಭವು ಸಾದಾತುಗಳು ಮತ್ತು ವಿದ್ವಾಂಸರ ನೇತೃತ್ವದಲ್ಲಿ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಕ್ಕೆ ಸತ್ಯ ವಿಶ್ವಾಸಿಗಳಾದ ತಾವೆಲ್ಲರೂ ಪಾಲ್ಗೊಳ್ಳಲು ಪ್ರಾಮುಖ್ಯತೆಯಿಂದ ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.. ಅಧ್ಯಕ್ಷರು &‌ ಸರ್ವ ಸದಸ್ಯರು ಜುಮ್ಮಾ ಮಸೀದಿ & ದರ್ಗಾ ಶರೀಫ್ ಬೈತಡ್ಕ

About The Author

Leave a Reply