
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್( ರಿ.) ವಿಟ್ಲ ಕೇಪು ವಲಯದ ಶ್ರೀ ಉಳ್ಳಾಲ್ತಿ ಭಜನಾ ಮಂದಿರ(ರಿ.) ಅಮೈ ಕೇಪು, ಭಜನಾ ಮಂದಿರದ ನವೀಕರಣಕ್ಕೆ ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 1,50,000/- ( ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ) ಮೊತ್ತದ ಅನುದಾನ ಬಿಡುಗಡೆಗೊಳಿಸಿದರು.



ವಿಟ್ಲ ತಾಲೂಕಿನ ಕೇಪು ವಲಯದ ಅಮೈ ಶ್ರೀ ಉಳ್ಳಾಲ್ತಿ ಭಜನಾ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರಕ್ಕೆ ಸಮಿತಿಯವರು ಅನುದಾನದ ಮನವಿಯನ್ನು ಸಲ್ಲಿಸಿದ್ದು, ಸಲ್ಲಿಸಿದ ಮನವಿಗೆ ಕ್ಷೇತ್ರದಿಂದ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಸಾದ ರೂಪದಲ್ಲಿ ರೂ 1,5೦,೦೦೦೦/- (ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ)ಯ ಅನುದಾನವನ್ನು ಮಂಜೂರು ಮಾಡಿದ್ದಾರೆ.
ಮಂಜೂರಾತಿ ಪತ್ರವನ್ನು ಇಂದು ಒಕ್ಕೂಟದ ಅಧ್ಯಕ್ಷರಾದ ವೇಣುಗೋಪಾಲ್, ಒಕ್ಕೂಟದ ಉಪಾಧ್ಯಕ್ಷರಾದ ಪುಷ್ಪಲತಾ, ವಲಯದ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ, ಸೇವಾಪ್ರತಿನಿಧಿ ಜ್ಯೋತಿ ಸೇರಿ ಮಂಜೂರಾತಿ ಪತ್ರವನ್ನು ಸಮಿತಿಯ ಅಧ್ಯಕ್ಷರು ಶ್ರೀ ನಾರಾಯಣ ಕುಲಾಲ್ ಅಮೈ, ನವೀಕರಣ ಸಮಿತಿ ಅಧ್ಯಕ್ಷರಾದ ಸಚ್ಚಿದಾನಂದ ಶಾಸ್ತ್ರೀ, ಮತ್ತು ಸಮಿತಿಯ ಪದಾಧಿಕಾರಿಗಳಿಗೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಊರಿನ ಸಾರ್ವಜನಿಕ ಭಕ್ತಾದಿಗಳು ಗಣ್ಯರು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.