ಉಳ್ಳಾಲ: ಇಲ್ಲಿನ ಕೋಟೆಕಾರಿನ ಬ್ಯಾಂಕ್ ನ ಕೆ.ಸಿರೋಡು ಶಾಖೆಯಿಂದ ಭಾರೀ ದರೋಡೆ ನಡೆದ ಘಟನೆ ಜ.17ರಂದು ನಡೆದಿದೆ.
ಕೋಟೆಕಾರ್ ನಲ್ಲಿ ಬ್ಯಾಂಕ್ ಕಳ್ಳತನ ನಡೆದಿದ್ದು 11 ಕೋಟಿ ಮೌಲ್ಯದ ಚಿನ್ನಾಭರಣ 5 ಲಕ್ಷ ರೂಪಾಯಿ ಹಣವನ್ನು ಗನ್ ತೋರಿಸಿ ಲೂಟಿ ಹೊಡೆದದ್ದಾರೆಂದು ಮಾಹಿತಿ ದೊರೆತಿದೆ.
ಗನ್ ಪಾಯಿಂಟ್ ನಲ್ಲಿ ದುಷ್ಕರ್ಮಿಗಳು ದರೋಡೆ ಮಾಡಿದ್ದು ಐವರು ಸದಸ್ಯರೊಂದಿಗೆ ದುಷ್ಕರ್ಮಿಗಳು ಫಿಯೆಟ್ ಕಾರಿನಲ್ಲಿ ಬಂದಿದ್ದಾರೆಂದು ತಿಳಿದಿದೆ. ದುಷ್ಕರ್ಮಿಗಳು ಸ್ಥಳದಿಂದ ಮಂಗಳೂರು ಕಡೆಗೆ ಪರಾರಿಯಾಗಿದ್ದು ಇದೀಗ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ..