ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ 2025 ನೇ ಸಾಲಿನ ನೂತನ ಸಾರಥಿಗಳು

ಪುತ್ತೂರು: ಪೀರ್ ಮೊಹಲ್ಲಾ ಜಮಾ ಅತ್ ಕಮಿಟಿ ಕೂರ್ನಡ್ಕಇದರ ಅಧೀನದಲ್ಲಿರುವ ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ವಾರ್ಷಿಕ ಮಹಾಸಭೆಯು ದಿನಾಂಕ 17/01/2025 ರಂದು ಕೂರ್ನಡ್ಕ ಮದ್ರಸ ಹಾಲ್ ನಲ್ಲಿ ನಡೆಯಿತು.
ದುವಾ ದೊಂದಿಗೆ ಉಸ್ತಾದ್ ಉನೈಸ್ ಫೈಝಿಯವರು ಉದ್ಘಾಟಿಸಿದರು.. ಫಿರ್ ಮೊಹಲ್ಲಾ ಮಸ್ಜಿದ್ ಕೂರ್ನಡ್ಕ ಇದರ ಅಧ್ಯಕ್ಷರಾದ ಕೆ ಹೆಚ್ ಖಾಸಿಂ ಹಾಜಿ ಹಾಗೂ ಕಾರ್ಯದರ್ಶಿ ಅಝೀಝ್ ಅಲ್ಲದೆ ರಿಯಾಝ್ ಭೂಮಿ, ಸಮೀರ್ ನಾಜೂಕ್ ಹಾಗೂ ಅಬ್ದುಲ್ ರಹಿಮಾನ್ ಮುಂತಾದವರು ಉಪಸ್ಥಿತರಿದ್ದರು. 2025 ನೇ ಸಾಲಿನ ನೂತನ ಪದಾಧಿಕಾರಿಗಳು ಆಯ್ಕೆಯಾದರು.

ಅಧ್ಯಕ್ಷರಾಗಿ : ಹೈದರ್ ಚಾಯ್ಸ್,  ಉಪಾಧ್ಯಕ್ಷ; ರಫೀಕ್ ಬಾಂಬೆ,  ಕಾರ್ಯದರ್ಶಿ; ಹಾರಿಸ್ ಪಠಾಣ್,  ಕೋಶಾಧಿಕಾರಿ; ಸಿದ್ದೀಕ್ ಕೆ ಎಸ್,  ಜೊತೆ ಕಾರ್ಯದರ್ಶಿ; ಇರ್ಷಾದ್ ಸಂಜಯನಗರ ಇವರನ್ನು ನೂತನ ಕಮೀಟಿಗೆ ಆಯ್ಕೆಮಾಡಲಾಯಿತು.

 

ಅದಲ್ಲದೆ ಈ ಸಂದರ್ಭದಲ್ಲಿ 17 ಸದಸ್ಯರ ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಯಿತು.  ಈ ನೂತನ ಪದಾಧಿಕಾರಿಗಳ ಮುಂದಿನ ಕಾರ್ಯವಧಿಯಲ್ಲಿ ಇನ್ನಷ್ಟು ಉತ್ತಮ ಕೆಲಸಗಳು ನಡೆಯಲಿ ಹಾಗೂ ಹಲವಾರು ಧಾರ್ಮಿಕ ಸಾಮಾಜಿಕ ಸೇವೆಗಳು ನೀಡಲಿ ಎಂಬುವುದೇ ಮೊಹಲ್ಲಾದ ಆಗ್ರಹವಾಗಿದೆ..ಆಯ್ಕೆಯಾದ ನೂತನ ಸಮಿತಿಗೆ ಹೃತ್ಪೂರ್ವಕ ಅಭಿನಂದನೆಗಳು…

Leave a Reply