ಬಂಟ್ವಾಳ: ಟೋಲ್‌ಗೇಟ್ ಸಿಬ್ಬಂದಿಯಿಂದ ಟ್ರಕ್ ಡ್ರೈವರ್ ಮೇಲೆ ಹಲ್ಲೆ

ಮಂಗಳೂರು:  ಬಿ.ಸಿ.ರೋಡ್ ಬ್ರಹ್ಮರಕೊಟ್ಲು ಟೋಲ್‌ಗೇಟ್ ಬಳಿ ಟ್ರಕ್ ಡ್ರೈವರ್ ಮೇಲೆ ಟೋಲ್ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟ್ರಕ್ ಡ್ರೈವರ್ ತನ್ನ ವಾಹನವನ್ನು ಟೋಲ್‌ಗೇಟ್ ದಾಟಿ ಮುಂದೆ ಸಾಗುತ್ತಿದ್ದಾಗ, ಟೋಲ್ ಸಿಬ್ಬಂದಿಯೊಬ್ಬ ಡ್ರೈವರ್ ಮೇಲೆ ಹಲ್ಲೆ ನಡೆಸಿ, ಗೂಂಡಾವರ್ತನೆ ತೋರಿದ್ದಾನೆ. ಡ್ರೈವರ್ ಟ್ರಕ್ ಒಳಗಿದ್ದರೂ ಸಹ ಸಿಬ್ಬಂದಿಯು ಆತನ ಮೇಲೆ ಹಲ್ಲೆ ನಡೆಸಿ, ಟ್ರಕ್ ಅನ್ನು ಹಿಂದಕ್ಕೆ ಓಡಿಸುವಂತೆ ಬಲವಂತಪಡಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಡ್ರೈವರ್ ತನ್ನ ವಾಹನವನ್ನು ಹಿಂದಕ್ಕೆ ಓಡಿಸಿದ್ದಾನೆ.
ಈ ಘಟನೆಯ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವೀಡಿಯೋದಲ್ಲಿ ಸಿಬ್ಬಂದಿಯ ಹಲ್ಲೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆಯೇ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Leave a Reply