
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕಿದ್ದ ಶಿಕ್ಷಕರೇ ನಾಚಿಕೆಗೇಡಿನ ಕೃತ್ಯ ಎಸಗಿದ್ದಾರೆ.ಶಾಲಾ ಕಚೇರಿಯಲ್ಲಿ ಹೆಡ್ ಮಾಸ್ಟರ್ ಶಿಕ್ಷಕಿಯೊಂದಿಗೆ ಸರಸ ಸಲ್ಲಾಪದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.ಶಾಲೆಯಲ್ಲಿ ಹೇಯ ಕೃತ್ಯ ಎಸಗಿದ ಶಿಕ್ಷಕರಿಬ್ಬರ ನಡೆಗೆ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.



ಈ ಘಟನೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಗಂಗ್ರಾರ್ ಬ್ಲಾಕ್‌ನ ಸಲೇರಾ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಡ್ ಮಾಸ್ಟರ್ ಮತ್ತು ಲೇಡಿ ಟೀಚರ್ ಕರ್ತವ್ಯ ಪ್ರಜ್ಞೆಯನ್ನು ಮರೆತು ರೊಮ್ಯಾನ್ಸ್ ಮಾಡಿದ್ದಾರೆ. ಪ್ರಿನ್ಸಿಪಾಲ್ ಕೊಠಡಿಯಲ್ಲಿ ಈ ಇಬ್ಬರು ಮುದ್ದಾಡುತ್ತಾ ಸರಸ ಸಲ್ಲಾಪದಲ್ಲಿ ತೊಡಗಿದ್ದು, ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಯಾರೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ವಿದ್ಯಾ ದೇಗುಲದಲ್ಲಿ ನಾಚಿಕೆಗೇಡಿನ ವರ್ತನೆಯನ್ನು ತೋರಿದ ಈ ಇಬ್ಬರೂ ಶಿಕ್ಷಕರನ್ನು ಅಮಾನತು ಮಾಡುವಂತೆ ಆಗ್ರಹಿಸಲಾಗಿದೆ.
ಜನವರಿ 19 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಇಂತಹ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡುವುದು ತಪ್ಪುʼ ಎಂದು ಹೇಳಿದರೆ. ಇನ್ನೊಬ್ಬರು ʼಈ ಇಬ್ಬರನ್ನೂ ಮೊದಲು ವಜಾ ಗೊಳಿಸಬೇಕುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಶಿಕ್ಷಕರಿಬ್ಬರ ಈ ನಾಚಿಕೆಗೇಡಿನ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.