
: ಮನೆಯ ಮುಂದೆ ಆಟವಾಡುತ್ತಿದ್ದ 3 ವರ್ಷದ ಮಗುವೊಂದು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ಗುಪ್ಪಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಡೆದಿದೆ.



ಜಿ. ಹೊಸಹಳ್ಳಿ ಗ್ರಾಮದ ಅಂಗಡಿ ಮಂಜಣ್ಣ ಎಂಬುವರ ಪುತ್ರ ಕುಶಾಲ್ (3) ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದೆ. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಮನೆಯ ಮುಂದಿನ ನೀರಿನ ತೊಟ್ಟಿಗೆ ಮಗು ಬಿದ್ದಿದೆ. ಮಗು ಸುಮಾರು ಹೊತ್ತಾದರೂ ಕಾಣದೆ ಇದ್ದಾಗ ಕುಟುಂಬ ಸದಸ್ಯರು ಮಗುವಿನ ಹುಡುಕಾಟಕ್ಕೆ ಮುಂದಾಗಿದ್ದಾರೆ. ಆಗ ನೀರಿನ ತೊಟ್ಟಿಯಲ್ಲಿ ಮಗು ಬಿದ್ದಿರುವುದು ಕಂಡು ಬಂದಿದೆ.
ಪೋಷಕರು ಗುಬ್ಬಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.