November 24, 2025
WhatsApp Image 2025-01-21 at 9.26.27 AM

ಮಂಗಳೂರು: ತಲಪಾಡಿಯ ಕೋಟೆಕಾರು ಸಹಕಾರಿ ಸಂಘದಲ್ಲಿ ಹಾಡುಹಗಲೇ ದರೋಡೆಗೈದ ಆರೋಪಿಗಳ ಜಾಡು ಹಿಡಿದು ತಮಿಳ್ನಾಡಿನಲ್ಲಿ ಕ್ಷಿಪ್ರವಾಗಿ ಬಂಧಿಸಿರುವ ಪೊಲೀಸರ ದಿಟ್ಟ ಕ್ರಮ ಶ್ಲಾಘನಾರ್ಹವಾದುದು ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ದರೋಡೆಯಾದ ಅಲ್ಪಾವಧಿಯಲ್ಲೇ ಬಂಧಿಸಿರುವುದರಿಂದ ಪೊಲೀಸರ ಮೇಲಿನ ವಿಶ್ವಾಸ ಮತ್ತು ನಂಬಿಕೆ ಇಮ್ಮಡಿಯಾಗಿದೆ. ಪೊಲೀಸರ ಶ್ರಮಕ್ಕೆ ಕೃತಜ್ಞತೆಗಳು. ಇದೇ ರೀತಿ ಬಂಟ್ವಾಳ ನಾರ್ಶದ ಸಿಂಗಾರಿ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನ ದರೋಡೆ ಪ್ರಕರಣದಲ್ಲೂ ಆರೋಪಿಗಳು ಶೀಘ್ರ ಪೊಲೀಸ್ ಬಲೆಗೆ ಬೀಳಲಿದ್ದಾರೆ. ಇದರ ತನಿಖೆಯಲ್ಲಿ ಬಹಳಷ್ಟು ಪ್ರಗತಿ ಕಂಡು ಬಂದಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ

About The Author

Leave a Reply