
ಕಾರವಾರ: ಯಲ್ಲಾಪುರ ಅರಬೈಲ್ ಘಟ್ಟದ ಗುಳ್ಳಾಪುರ ಬಳಿ ಭೀಕರ ಅಪಘಾತ ಸಂಭವಿಸಿದೆ. ಇಂದು ಬೆಳಗಿನ ಜಾವ ಮಂಜು ಮುಸುಕಿದ ಹೆದ್ದಾರಿ ೬೩ ರಲ್ಲಿ ತರಕಾರಿ ತುಂಬಿದ ಲಾರಿ ಪಲ್ಟಿಯಾಗಿ , ಲಾರಿಯಲ್ಲಿದ್ದ 25 ಜನ ತರಕಾರಿ ವ್ಯಾಪಾರಿಗಳ ಪೈಕಿ 9 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.



ಗಾಯಗೊಂಡ 15 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹಾವೇರಿ ಜಿಲ್ಲೆಯ ಸವಣೂರು ನಿಂದ ಕುಮಟಾ ಸಂತೆಗೆ ತರಕಾರಿ ವ್ಯಾಪರಿಗಳು ಬರುತ್ತಿದ್ದರು ಎನ್ನಲಾಗಿದೆ .ಈ ಅಪಘಾತದಲ್ಲಿ ಹತ್ತು ಜನರ ಸಾವು ಕಂಡಂತಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ .ಮೃತರು ಸವಣೂರು ಮೂಲದವರು ಎಂದು ತಿಳಿದು ಬಂದಿದೆ.