October 13, 2025
WhatsApp Image 2025-01-23 at 2.22.37 PM

ಮಂಗಳೂರು : ಅನೈತಿಕ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಶ್ರೀರಾಮ ಸೇನೆ ಕಾರ್ಯಕರ್ತರು ಅನೈತಿಕ ಪೊಲೀಸ್ ಗಿರಿ ನಡೆಸಿ ಮಸಾಜ್ ಪಾರ್ಲರ್ ಮೇಲೆ ದಾಳಿ ನಡೆಸಿ, ಪಾರ್ಲರ್ ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿರುವ ಘಟನೆ ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪಕ್ಕದಲ್ಲಿರುವ ಬಿಜೈ ಬಳಿಯ ಕಲರ್ಸ್ ಬ್ಯೂಟಿ ಪಾರ್ಲರ್ ನಲ್ಲಿ ಘಟನೆ ನಡೆದಿದೆ.

ಮಸಾಜ್ ಸೆಂಟರ್ ಗೆ ದಾಳಿ ನಡೆಸಿ ಶ್ರೀರಾಮ ಸೇನೆ ಗಲಾಟೆ ನಡೆಸಿದ್ದು, ಸ್ಪಾ ಸೆಂಟರ್ ನಲ್ಲಿ ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೈ ಬಳಿಯ ಕಲರ್ಸ್ ಹೆಸರಿನ ಮಸಾಜ್ ಪಾರ್ಲರ್ ಮೇಲೆ ಶ್ರೀರಾಮ ಸೇನೆ ದಾಳಿ ಮಾಡಿ ಅನೈತಿಕ ಪುಂಡಾಟಗೆ ನಡೆಸಿದೆ. ಮಸಾಜ್ ಸೆಂಟರ್ ಮೇಲೆ ಶ್ರೀರಾಮ ಸೇನೆ ದಾಳಿ ಮಾಡಿದೆ ಮಂಗಳೂರಿನ ಬಿಜೆ ಕೆಎಸ್ಆರ್ಟಿಸಿ ಬಳಿ ಇರುವ ಮಸಾಲ್ ಸೆಂಟರ್ ಬಳಿ ಶ್ರೀರಾಮ ಸೇನೆ ಅನೈತಿಕ ಪೊಲೀಸ್ ಗಿರಿ ನಡೆಸಿದೆ.

ಸೆಂಟರ್ ಮೇಲೆ ದಾಳಿ ನಡೆಸಿ ಪೀಠೋಪಕರಣ ದ್ವಂಸ ಮಾಡಿದೆ.ಅನೈತಿಕ ಚಟುವಟಿಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಶ್ರೀರಾಮ ಸೇರಿ ಮಸಾಜ್ ಸೆಂಟರ್ ಮೇಲೆ ದಾಳಿ ಮಾಡಿ ದೌರ್ಜನ್ಯ ಎಸಗಿದೆ. ಈ ಮಸಾಜ್ ಪಾರ್ಲರ್ ನಲ್ಲಿ ಇರುವಂತಹ ಗಾಜುಗಳನ್ನು ಪುಡಿಪುಡಿ ಮಾಡಿದ್ದು ಅಲ್ಲದೆ ಎಲ್ಲವನ್ನು ಎತ್ತಿ ಬಿಸಾಕಿ ಧ್ವಂಸಗೊಳಿಸಿದ್ದಾರೆ

About The Author

Leave a Reply