August 30, 2025
WhatsApp Image 2025-01-24 at 8.28.57 AM

ಮಂಗಳೂರು: ವಿಟ್ಲ ಬೋಳಂತೂರು ಉದ್ಯಮಿಯ ಮನೆಗೆ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಪ್ರಕರಣವನ್ನು ಭೇದಿಸಿದ ದ.ಕ.ಜಿಲ್ಲಾ ಪೊಲೀಸರು ಅಂತಾರಾಜ್ಯ ದರೋಡೆಕೋರನನ್ನು ಬಂಧಿಸಿ, ಕಾರು, ನಗದು ವಶಪಡಿಸಿಕೊಂಡಿದ್ದಾರೆ.

ಕೇರಳದ ಕೊಲ್ಲಂ ನಿವಾಸಿ ಅನಿಲ್‌ ಫರ್ನಾಂಡಿಸ್ (49) ಬಂಧಿತ ಆರೋಪಿ. ಜನವರಿ 3ರ ರಾತ್ರಿ ಬಂಟ್ವಾಳ ತಾಲೂಕಿನ ವಿಟ್ಲದ ಬೋಳಂತೂರು ನಾರ್ಶ ಎಂಬಲ್ಲಿನ ಸಿಂಗಾರಿ ಬೀಡಿ ಉದ್ದಿಮೆಯ ಮಾಲಕರ ಮನೆಗೆ ನಕಲಿ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆದಿತ್ತು. ಆರು ಮಂದಿಯಿಂದ ಕೃತ್ಯ ನಡೆದಿತ್ತು. ಮನೆಯಲ್ಲಿ ಶೋಧ ನಡೆಸಿದ ದರೋಡೆಕೋರ ದಂಡು 30 ಲಕ್ಷ ರೂಪಾಯಿ ನಗದು ದರೋಡೆಗೈದು ಪರಾರಿಯಾಗಿತ್ತು.

ಸದ್ಯ ಪೊಲೀಸರು ಅನಿಲ್‌ ಫರ್ನಾಂಡಿಸ್‌‌ನನ್ನು ಬಂಧಿಸಿ, ಬಂಧಿತನಿಂದ ಕೃತ್ಯಕ್ಕೆ ಉಪಯೋಗಿಸಿದ ಎರ್ಟಿಗಾ ಕಾರು, 5 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ವಾಹನ ಹಾಗೂ ಸೊತ್ತಿನ ಮೌಲ್ಯ 11ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಕೃತ್ಯಕ್ಕೆ ಬಳಸಿದ ಕಾರಿಗೆ ಅಳವಡಿಸಿದ್ದ ನಕಲಿ TN-20-DB-5517 ನಂಬರ್ ಪ್ಲೇಟ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೃತ್ಯ ಎಸಗಿ ತಲೆಮರೆಸಿಕೊಂಡಿರುವ ಇನ್ನಷ್ಟು ಖದೀಮರ ಬಂಧನಕ್ಕೆ ಪೊಲೀಸರು ಬಲೆ‌ಬೀಸಿದ್ದಾರೆ.

About The Author

Leave a Reply