October 13, 2025
WhatsApp Image 2025-01-25 at 1.51.04 PM

 ರಾಜ್ಯದಲ್ಲಿ ದರೋಡೆಕೋರರ ಅಟ್ಟಹಾಸ ಮುಂದುವರೆದಿದ್ದು, ಬಳ್ಳಾರಿಯಲ್ಲಿ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ಅಪಹರಣಕಾರು ಅಪಹರಿಸಿರುವ ಘಟನೆ ನಡೆದಿದೆ.

ಬಳ್ಳಾರಿ ನಗರದ ಸೂರ್ಯನಾರಾಯಣ ನಗರದ ಶನೇಶ್ವರ ಗುಡ ಬಳಿ ವಾಕಿಂಗ್ ಗೆ ಹೋಗಿದ್ದ ಡಾ. ಸುನೀಲ್ ಅವರನ್ನು ದುಷ್ಕರ್ಮಿಗಳು ಅಪಹರಿಸಿದ್ದು, 6 ಕೋಟಿ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ.ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ವೈದ್ಯರನ್ನು ತಕ್ಷಣ ಬಾಯಿಮುಚ್ಚಿ ಕಾರಿನಲ್ಲಿ ಕೂಡಿಸಿಕೊಂಡು ತೆರಳಿದ್ದಾರೆ ಎನ್ನಲಾಗಿದೆ.

ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಸುನೀಲ್ ಅವರನ್ನು ನಗರದ ಸತ್ಯನಾರಾಯಣ ಪೇಟೆಯಲ್ಲಿನ ಶನೇಶ್ವರ ದೇವಸ್ಥಾನದ ಬಳಿ ವಾಕಿಂಗ್ ಮಾಡುವಾಗ ಅಪರಿಚಿತ ವ್ಯಕ್ತಿಗಳು ಶನಿವಾರ ಬೆಳಗ್ಗೆ ಕಿಡ್ನಾಪ್ ಮಾಡಿದ್ದು, 6ಕೋಟಿ ರೂಗಳಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರೆ.

About The Author

Leave a Reply