August 30, 2025
WhatsApp Image 2025-01-25 at 12.24.48 PM

ಮಂಗಳೂರು: ಮದುವೆ ನಿಶ್ಚಿಯವಾಗಿ ಇನ್ನೇನು ಮದುವೆಗೆ ಕೆಲ ದಿನ ಇರುವಾಗಲೇ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 24 ರಂದು ಮೀಂಜ ಸಮೀಪದ ಬೆಜ್ಜದಲ್ಲಿ ನಡೆದಿದೆ.

ಅಜಿತ್ ಕುಮಾರ್ (28) ಆತ್ಮಹತ್ಯೆಗೆ ಶರಣಾದ ಯುವಕ.ಅಜಿತ್ ಕುಮಾರ್ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.ಇವರಿಗೆ ಹೊಸಂಗಡಿ ಸಮೀಪದ ಯುವತಿ ಜೊತೆ ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಅದಕ್ಕಾಗಿ ಮನೆಯವರು ವಿವಾಹಕ್ಕೆ ತಯಾರಿಗಾಗಿ ಸಾಮಾಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೃತ್ಯ ಎಸಗಲಾಗಿದೆ. ಸಂಜೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇಣು ಬಿಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply