February 19, 2026
WhatsApp Image 2024-10-27 at 5.43.09 PM

ರಾಜ್ಯದಲ್ಲಿ ಇಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ರಾಯಚೂರು ಜಿಲ್ಲೆಯಲ್ಲಿ ಕತ್ತು ಸೀಳಿ MSC ಓದುತ್ತಿದ್ದ ವಿದ್ಯಾರ್ಥಿನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನ ಹೊರಭಾಗದಲ್ಲಿ ಈ ಒಂದು ಭೀಕರ ಹತ್ಯೆ ನಡೆದಿದೆ.

ಕೊಲೆಯಾದ ವಿದ್ಯಾರ್ಥಿನಿಯನ್ನು ಸಿಫಾ (22) ಎಂದು ತಿಳಿದುಬಂದಿದೆ. ಸಿಂಧನೂರು ಸರ್ಕಾರಿ ಕಾಲೇಜಿನಲ್ಲಿ ಎಂ ಎಸ್ ಸಿ ಓದುತ್ತಿದ್ದ ಸಿಫಾ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ನಿವಾಸಿಯಾಗಿದ್ದಾಳೆ. ಪರಿಚಯಸ್ತರೇ ವಿದ್ಯಾರ್ಥಿನಿ ಸಿಫಾಳನ್ನು ಕೊಲೆ ಮಾಡಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದ್ದು, ಘಟನಾ ಸ್ಥಳಕ್ಕೆ ಸಿಂಧನೂರು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

About The Author

Leave a Reply