ಮಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ಉಳ್ಳಾಲ ಕ್ಷೇತ್ರದ ತೊಕ್ಕೋಟಿನಲ್ಲಿ ಶಂಕುಸ್ಥಾಪನೆಯಾದ ನೂತನ ಬ್ಯಾರಿ ಭವನವನ್ನು ಅಸೈಗೋಳಿ ಸಮೀಪದ ತಿಪ್ಲ ಪದವಿಗೆ ಸ್ಥಳಾಂತರ ಗೊಳಿಸಿದ್ದು. ಇದರ ನಿರ್ಮಾಣ ಕಾರ್ಯ ಅತೀ ಶೀಘ್ರದಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಕರ್ನಾಟಕ ವಿಧಾನ ಸಭಾ ಅಧ್ಯಕ್ಷರು ಆಗಿರುವ ಶ್ರೀ ಯು. ಟಿ ಖಾದರ್ ಅವರು ಪಬ್ಲಿಕ್ ವಾಯ್ಸ್ ವಾಟ್ಸಾಪ್ ಬಳಗದ ನಿಯೋಗಕ್ಕೆ ಭರವಸೆ ನೀಡಿದರು.
ಈ ಹಿಂದೆ ನಿಗದಿಪಡಿಸಲಾದ ಜಾಗ ತೀರಾ ಕಿರಿದಾಗಿದ್ದು ಕೆಲವು ಮಂದಿ ಈ ಹಿಂದೆ ಪ್ರತಿಭಟನೆ ಮೂಲಕ ಸ್ಥಳಾಂತರಕ್ಕೆ ಒತ್ತಾಯವನ್ನೂ ಮಾಡಿದ್ದರು. ಆದರೆ ನಾವು ಯಾವುದೇ ಒತ್ತಾಯಕ್ಕೆ ಮಣಿದಿಲ್ಲ, ಬದಲಾಗಿ ಹಿಂದಿನ ಅಕಾಡೆಮಿ ಅಧ್ಯಕ್ಷರು ಪರ್ಯಾಯವಾಗಿ ಗುರುತಿಸಿ ಕಾದಿರಿಸಿದ ಜಾಗ ವಿಶಾಲವಾಗಿದ್ದು, ಎಲ್ಲಾ ಅನುಕೂಲತೆ ಹೊಂದಿರುವುದರಿಂದ ಈ ಜಾಗ ಸೂಕ್ತ ಎಂದು ಪರಿಗಣಿಸಿ ನೂತನ ಕಟ್ಟಡಕ್ಕೆ ಬೇಕಾದ ನೀಲನಕ್ಷೆ ತಯಾರಿಸಿದ್ದು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿಗಳಿಂದ ಶಿಲಾನ್ಯಾಸ ಕೂಡ ನಡೆಸಲಾಗುಗುದು ಎಂದು ನಿಯೋಗಕ್ಕೆ ಶಾಸಕರು ಶ್ರೀ ಯು. ಟಿ ಖಾದರ್ ಅವರು ತಿಳಿಸಿದ್ದಾರೆ.
ಫಾರೂಕ್ ಉಳ್ಳಾಲ್ ರವರ ನೇತೃತ್ವದಲ್ಲಿ
ಪಬ್ಲಿಕ್ ವಾಯ್ಸ್ ನಿಯೋಗದ ಪ್ರತಿನಿಧಿಗಳಾದ
ಸಲಾಂ ಉಚ್ವಿಲ್, ಸಂಶುದ್ದೀನ್ ತಲೆಮೊಗರು, ಅಬ್ದುಲ್ ರವೂಫ್ ಕೊಳವೂರು, ಯೂಸುಫ್ ಸುಲ್ತಾನ್, ವನ್ಹರ್ ಕುಪ್ಪೆ ಪದವು, ಮುಂತಾದವರು ಉಪಸ್ಥಿತರಿದ್ದರು.
ಪಬ್ಲಿಕ್ ವಾಯ್ಸ್ ಅಡ್ಮಿನ್ ಬಳಗದ ಮೂಲಕ ಒಂದು ನಿಯೋಗವನ್ನು ರಚಿಸಿ ಮಾನ್ಯ ಸಭಾಧ್ಯಕ್ಷರು ಉಳ್ಳಾಲ ಕ್ಷೇತ್ರದ ಶಾಸಕರು ಆಗಿರುವ ಶ್ರೀ ಯು. ಟಿ ಖಾದರ್ ಅವರಲ್ಲಿ ಬ್ಯಾರಿ ಭವನದ ರೂಪುರೇಷೆಯ ಬಗ್ಗೆ ಚರ್ಚೆ ನಡೆಸಿ ಮನವಿ ಸಲ್ಲಿಸಲಾಯಿತು.