ಹಾಸನ: ಬೈಪಾಸ್ ರಸ್ತೆಯ ತೆರಳುತ್ತಿದ್ದ ಖಾಸಗಿ ಬಸ್ (Bus) ತಡೆದ ಪುಡಿ ರೌಡಿ (Pudi Rowdy) ಓರ್ವ ಮಾರಕಾಸ್ತ್ರ (ಲಾಂಗ್) ಹಲ್ಲೆಗೆ ಯತ್ನಿಸಿ ಅಟ್ಟಹಾಸ ಮೆರೆದಿರುವ ಆತಂಕಕಾರಿ ಘಟನೆ ಹಾಸನ ಹೊರವಲಯದ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಬುಧವಾರ ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು, ಬೈಪಾಸ್ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ (Bengaluru To Mangaluru) ಖಾಸಗಿ ಬಸ್ ಸಂಚರಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಅಡ್ಡ ಹಾಕಿ ನಿಲ್ಲಿಸಿದ್ದಾನೆ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ, ಲಾಂಗ್ ನಿಂದ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದಾನೆ.
ಪುಡಿ ರೌಡಿಯ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.