ಫ್ಲ್ಯಾಟ್‌ನೊಳಗೆ ಸಿಲುಕಿದ ಮಗುವಿನ ರಕ್ಷಣೆ

ಉಪ್ಪಳ: ಉಪ್ಪಳ ಗೇಟ್‌ ಬಳಿಯ ಅಪಾರ್ಟ್‌ಮೆಂಟೊಂದರ ನಾಲ್ಕನೇ ಮಹಡಿಯ ಫ್ಲ್ಯಾಟ್‌ನಲ್ಲಿ ಸಿಲುಕಿದ್ದ 1 ವರ್ಷ 8 ತಿಂಗಳ ಮಗುವನ್ನು ಅಗ್ನಿಶಾಮಕ ದಳ ರಕ್ಷಿಸಿದೆ. ತಾಯಿ ಮತ್ತು ಮಗು ಫ್ಲ್ಯಾಟ್‌ನ ಹೊರಗಿದ್ದರು.
ಈ ಸಂದರ್ಭ ತಾಯಿಯ ಕಣ್ತಪ್ಪಿಸಿ ಮಗು ಒಳಗೆ ಹೋಗಿ ಬಾಗಿಲು ಮುಚ್ಚಿ ಚಿಲಕ ಹಾಕಿತ್ತು. ಸ್ಥಳೀಯರು ಎಷ್ಟೇ ಪ್ರಯತ್ನಿಸಿದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.
ಈ ಘಟನೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿ ಚಿಲಕವನ್ನು ಮುರಿದು ಬಾಗಿಲು ತೆರೆದು ಮಗುವನ್ನು ರಕ್ಷಿಸಿದರು.

Leave a Reply