October 13, 2025
WhatsApp Image 2025-02-03 at 2.08.28 PM

ಬಂಟ್ವಾಳ: ಬಸ್‌‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೋರ್ವರ ಬ್ಯಾಗ್‌ನಿಂದ ನಗ-ನಗದು ಕಳವು ಮಾಡಿದ ಘಟನೆ ನಡೆದಿದೆ.

ರಾಜಗೋಪಾಲ್ ಕಾರಂತ ಯಲಹಂಕ ಉಪನಗರ, ಬೆಂಗಳೂರು ಎಂಬವರ ದೂರಿನಂತೆ ಹೆಂಡತಿಯ ಮನೆಯು ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಆಗಿರುತ್ತದೆ. ಹೆಂಡತಿಯ ಊರಿನಲ್ಲಿ ಖಾಸಗಿ ಕಾರ್ಯಕ್ರಮ ಇದ್ದುದರಿಂದ ಮನೆಯಿಂದ ಚಿನ್ನವನ್ನು ಬಾಕ್ಸ್‌‌ನಲ್ಲಿ ಇಟ್ಟುಕೊಂಡು ಅದರ ಜೊತೆಯಲ್ಲಿ 3000 ರೂ ಹಣವನ್ನು ತಮ್ಮ ಲಗೇಜು ಬ್ಯಾಗ್ ನಲ್ಲಿರಿಸಿ ತನ್ನ ಹೆಂಡತಿ ಮತ್ತು ಅಳಿಯನೊಂದಿಗೆ ಫೆ.1 ರಂದು ರಾತ್ರಿ ಬೆಂಗಳೂರು ಮೆಜಸ್ಟಿಕ್ ನಿಂದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೊರಟಿರುತ್ತಾರೆ.

ಬರುವ ದಾರಿಯಲ್ಲಿ, ಕುಣಿಗಲ್ ಬಳಿ ಬಸ್ ನಿಲ್ಲಿಸಿದಾಗ ರಾಜಗೋಪಾಲ್ ಅವರ ಹೆಂಡತಿ ಮತ್ತು ಅಳಿಯ ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗ್‌‌ಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿರುತ್ತಾರೆ. ಫೆ.2 ರಂದು ಮುಂಜಾನೆ ಬಸ್ ವಗ್ಗ ಕಾರಿಂಜಾ ಕ್ರಾಸ್ ತಲುಪಿದಾಗ ಬಸ್ಸಿನಿಂದ ಕೆಳಗೆ ಇಳಿದು, ಅಲ್ಲಿಯೇ ಬಸ್ ನಿಲ್ದಾಣದ ಪಕ್ಕದಲ್ಲಿ ಬ್ಯಾಗನ್ನು ತೆರೆದು ನೋಡಿದಾಗ ಒಟ್ಟು 144 ಗ್ರಾಂ ಚಿನ್ನ ಅಂದಾಜು ಮೌಲ್ಯ 10,08,000/- ಹಾಗೂ ರೂ 3000/- ನಗದು ಕಳ್ಳತನ ವಾಗಿರುವುದು ತಿಳಿದುಬಂದಿರುತ್ತದೆ. ಯಾರೋ ಕಳ್ಳರು ಬಸ್‌‌ನಲ್ಲಿ ಅಥವಾ ಕುಣಿಗಲ್‌ನ ಹೋಟೆಲ್ ಬಳಿ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ ಕ್ರ ನಂಬ್ರ : 09/2025 ಕಲಂ : 303(2), 305(b) ಬಿ ಎನ್ ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

About The Author

Leave a Reply