ಮೊಬೈಲ್ ರೀಟೈಲರ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಸಹಯೋಗದೊಂದಿಗೆ ದಿವಂಗತ ಪ್ರಕಾಶ್ ಪುರುಷರ ಕಟ್ಟೆ ಹಾಗೂ ರಫೀಕ್ ಸ್ಕೈ ಇವರ ಸ್ಮರಣಾರ್ಥ ದಿನಾಂಕ 2-2-2025 ಆದಿತ್ಯವಾರದಂದು ನರಿಮೊಗರು ಶಾಲಾ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ನಡೆಯಿತು.
ಉದ್ಯಮಿ ಕೊಟಾರಿ ರವಿ ತುಳಸಿದಾಸ್ ಅವರು ಪಂದ್ಯಾಟವನ್ನುಉದ್ಘಾಟಿಸಿದರು. ಮೊಬೈಲ್ ರಿಟೇಲರ್ ಸದಸ್ಯರೇ ಒಳಗೊಂಡಂತಹ 5 ತಂಡಗಳ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಬಹಳ ಅಚ್ಚುಕಟ್ಟಾಗಿ ನಡೆಯಿತು . ನಾಸಿರ್ ಲಾಕಪ್ ಮೊಬೈಲ್ ಮಾಲಕತ್ವದ ಪುತ್ತೂರು ನೈಟ್ ರೈಡರ್ಸ್ ತಂಡವು ಪ್ರಥಮ ಬಹುಮಾನವನ್ನು ಪಡೆದುಕೊಂಡರೆ, ಸಂಪತ್ ಡಿಕೆ ಮೊಬೈಲ್ ಅವರ ಮಾಲಕತ್ವದ ಪುತ್ತೂರು ನೈಟ್ ಕ್ಯಾಪಿಟಲ್ ತಂಡವು ರನ್ನರ್ ಪಟ್ಟವನ್ನು ಮುಡಿಗೇರಿಸಿಕೊಂಡಿತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ರಾಜೇಶ್ ಮಾಬಿಯನ್ ಅಧ್ಯಕ್ಷರು ದಕ್ಷಿಣ ಕನ್ನಡ ಮತ್ತು ಉಡುಪಿ ಮೊಬೈಲ್ ರಿಟೈಲೆಟ್ ಅಸೋಸಿಯೇಶನ್, ಉಪಾಧ್ಯಕ್ಷರಾದ ಇಮ್ತಿಯಾಜ್ ,ಶ್ರೀ ಪ್ರಶಾಂತ್ ಶೆಣೈ ಅಧಿಕೃತ ವಿತರಕರು ಸ್ಯಾಮ್ಸಂಗ್ ಪ್ರಶಸ್ತಿಗಳನ್ನು ವಿಜೇತರಿಗೆ ಬಹುಮಾನ ಹಸ್ತಾಂತರಿಸಿದರು. ಸಭೆಯ ವೇದಿಕೆಯಲ್ಲಿ ಮೊಬೈಲ್ ರಿಟೇಲರ್ ಎಸೋಸಿಯೇಷನ್ ಇದರ ಗೌರಾಧ್ಯಕ್ಷರು ಶ್ರೀ ಸಿರಾಜುದ್ದೀನ್ ,ಶ್ರೀ ಚೇತನ್ ಕುಮಾರ್ ಅಧ್ಯಕ್ಷರು ,ಶ್ರೀ ಹಫೀಜ್ ಅಹ್ಮದ್ ಕಾರ್ಯದರ್ಶಿಗಳು , ಶ್ರೀ ಶತೀಶ್ ಕ್ರೀಡಾ ನಿರ್ದೇಶಕರು , ಶ್ರೀ ವಿಶು ಸಂಗಟಕರು ,ರೆಹಮಾನ್ ಸುಳ್ಯ ಮೊಬೈಲ್ ರಿಟೇಲರ್ ಅಸೋಸಿಯೇಷನ್ ಅಧ್ಯಕ್ಷರು , ಶಫೀಕ್ ಎಂ ಎಸ್ ‘ ಕೃಷ್ಣ ಮೊಬೈಲ್ ನಕ್ಲಿನ್ ಶಶಿ ರಾಜ್ ಮಾರ್ಕ್, ಜಮಾಲ್, ರಿಯಾಜ್, ಸಂಪತ್. ರಿಯಾದ್ ಐ ಮಾಕ್, ಖಾದರ್ ಉಪಸ್ಥಿತರಿದ್ದರು.
ಕ್ರೀಡಾಪಟುಗಳು ಮತ್ತು ಸಾರ್ವಜನಿಕರಿಗೆ ಊಟೋಪಚಾರದ ಸಂಪೂರ್ಣ ವ್ಯವಸ್ಥೆಯನ್ನು ಇದರ ಸದಸ್ಯರಾದ ಅನ್ಸಾರ್ ಪ್ರಿಯಾ ಮೊಬೈಲ್ ಅವರು ಏರ್ಪಾಡು ಮಾಡಿದ್ದರು. ಬಹಳ ಸುಂದರವಾದ ಸೌಹಾರ್ದಯುತವಾದ ಒಂದು ವಂದ್ಯಕೂಟವನ್ನು ಮೊಬೈಲ್ ರಿಟೈಲರ್ ಅಸೋಸಿಯೇಷನ್ ಪುತ್ತೂರು ತಾಲೂಕು ಇದರ ಸರ್ವ ಸದಸ್ಯರು ನಡೆಯುವಲ್ಲಿ ಯಶಸ್ವಿಯಾದರು ಹನೀಫ್ ತಿಂಗಳಾಡಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು