ಕಾರು ಮರಕ್ಕೆ ಡಿಕ್ಕಿ ಮಹಿಳೆ ಮೃತ್ಯು- ನಾಲ್ಕು ಮಂದಿಗೆ ಗಾಯ

ಬ್ರಹ್ಮಾವರ: ಕೊಕ್ಕರ್ಣೆ ಸಮೀಪದ ಕಾಡೂರಿನಗೋಳಿಕಟ್ಟೆ ಬಳಿಯ ತಿರುವಿನಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದಾರೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಬೀಜಾಡಿಯ ಜಯಲಕ್ಷ್ಮೀ (65) ಮೃತಪಟ್ಟಿದ್ದಾರೆ.

ರಾಮಚಂದ್ರ ಭಟ್, ಸುಜಾತಾ, ಮಂಗಳಾ ಹಾಗೂ ಪ್ರೇಮಾ ಗಾಯಗೊಂಡಿದ್ದಾರೆ. ಅವರು ಹೆಬ್ರಿ ಕಬ್ಬಿನಾಲೆ ಜಾತ್ರೆ ಮುಗಿಸಿ ಮಂದಾರ್ತಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply