October 26, 2025
WhatsApp Image 2025-02-06 at 2.52.47 PM
ಮಂಗಳೂರು: ಸ್ಟಾಕ್‌ ಕಮ್ಯೂನಿಟಿಗೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಮೂಲಕ ಬಂದ ಸಂದೇಶವನ್ನು ನಂಬಿ 13,09,245 ರೂ. ಕಳೆದುಕೊಂಡಿರುವ ಕುರಿತಂತೆ ಉರ್ವ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರಿಗೆ ವಿಐಪಿ3 ಗ್ಲೋಬಲ್‌ ಸೆಕ್ಯುರಿಟೀಸ್‌ ಅಫೀಶಿಯಲ್‌ ಸ್ಟಾಕ್‌ ಕಮ್ಯೂನಿಟಿ ಎನ್ನುವ ಹೆಸರಿನಲ್ಲಿ ಡಿ. 14ರಂದು ವಾಟ್ಸ್‌ಆ್ಯಪ್‌ ಸಂದೇಶ ಬಂದಿದ್ದು, ಅವರು ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಸೇರ್ಪಡೆಯಾದರು.
ಗುಂಪಿನಲ್ಲಿ ಬಂದ ಸಂದೇಶಗಳನ್ನು ನಂಬಿ ಐಪಿಒ ಸ್ಟಾಕ್‌ಗಳಿಗೆ ನೋಂದಾಯಿಸಿ ವಿವಿಧ ಐಪಿಒ ಮೊತ್ತದ ಸ್ಟಾಕ್‌ಗಳನ್ನು ಖರೀದಿಸಿ ಲಕ್ಷಾಂತರ ರೂ. ಮೊತ್ತವನ್ನು ಜಮೆ ಮಾಡಿದ್ದರು. ಅಂತಿಮವಾಗಿ ಇದು ಮೋಸದ ಜಾಲ ಎಂದು ತಿಳಿಯುವಷ್ಟರಲ್ಲಿ 13,09,245 ರೂ. ಕೈಜಾರಿತ್ತು. ಈ ಮೊತ್ತವನ್ನು ವಾಪಸು ಕೊಡಿಸಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

About The Author

Leave a Reply