
ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮ ಪಂಚಾಯತಿನಲ್ಲಿ ಮಹಿಳಾ ಗ್ರಾಮ ಸಭೆಯು ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ ಹಾಗೂ ಮಕ್ಕಳ ಗ್ರಾಮ ಸಭೆಯು ಕಾಡುಮಠ ಶಾಲೆಯ ಪಾತಿಮತ್ ಸುಹಾ ಅದ್ಯಕ್ಷತೆಯಲ್ಲಿ ಕೊಳ್ನಾಡು ಗ್ರಾ.ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.



ಗ್ರಾಮದ ಎಲ್ಲಾ ಶಾಲೆಗಳಿಂದ ಆಗಮಿಸಿದ ಮಕ್ಕಳು ತಮ್ಮ ತಮ್ಮ ಶಾಲೆಗಳಿಗೆ ಬೇಕಾದ ಬೇಡಿಕೆಗಳ ಪಟ್ಟಿ ಸಲ್ಲಿಸಿದರು.ಕೊಳ್ನಾಡು ಗ್ರಾಮ ಪಂಚಾಯತ್ ವತಿಯಿಂದ ಆದ ಅಭಿವೃದ್ದಿ ಕಾರ್ಯಗಳಿಗೆ ಅಭಿನಂದನೆ ಸಲ್ಲಿಸಿದರು.ನಂತರ ಇವತ್ತಿನ ಮಹಿಳಾ ಗ್ರಾಮ ಸಭೆಯ ಅದ್ಯಕ್ಷತೆ ವಹಿಸಿ ಅಸ್ಮ ಹಸೈನಾರ್ ಮಹಿಳೆಯರ ಶ್ರೇಯೋಬಿವೃದ್ದಿ,ಸಂಘಟಿತ ಸದೃಡತೆಯ ಬಗ್ಗೆ,ಮಹಿಳೆಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಸವಿವರವಾಗಿ ಮಾತಾಡಿದರು.ಗ್ರಾ.ಪಂಚಾಯತ್ ಅಧ್ಯಕ್ಷರಾದ ಅಶ್ರಪ್ ಸಾಲೆತ್ತೂರು ಸಭೆಯ ಆರಂಭದಲ್ಲಿ ಭಾಗವಹಿಸಿ ವೈಯಕ್ತಿಕ ಕಾರಣದಿಂದ ತುರ್ತಾಗಿ ನಿರ್ಗಮಿಸಿದ ಹಿನ್ನಲೆ,ಉಪಾದ್ಯಕ್ಷರು ಸಭೆಯನ್ನು ಯಶಸ್ವಿಯಾಗಿ ನಡೆಸುವ ಮೂಲಕ ಸಭೆಯಲ್ಲಿ ಬಂದ ಪ್ರಶ್ನೆಗಳಿಗೆ ಸುಲಲಿತವಾಗಿ ಉತ್ತರಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಅಂಗನವಾಡಿ ಕೇಂದ್ರಗಳ ವಿಟ್ಲ ವಲಯ ಕೊಳ್ನಾಡು ವ್ಯಾಪ್ತಿಯ ಮೆಲ್ವಿಚಾರಕಿ ರೇಣುಕ ಬಾಗವಹಿಸಿದರು.
ಈ ಸಂಧರ್ಭದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಹಿರಿಯ ಸದಸ್ಯರಾದ ಜಯಂತಿ.ಎಸ್.ಪೂಜಾರಿ,ಪ್ರಶಾಂತ್ ಶೆಟ್ಟಿ ಅಗರಿ,ಅಬ್ದುಲ್ ಹಮೀದ್ ಸುರಿಬೈಲ್, ಸವಿತಾ,ಸುಲೋಚನ ರೈ,ಬಾಗೀರಥಿ,ರತ್ನಾ ಕುಳಾಲು,ಸಂಜೀವಿ ಕುಳಾಲು,ಕಾರ್ಯದರ್ಶಿ ನಾರಯಣ್ ಸೇರಿದಂತೆ ಸಿಬ್ಬಂದಿಗಳು,ಗ್ರಾಮಸ್ಥರು ಉಪಸ್ತಿತರಿದ್ದರು.