
ಖ್ಯಾತ ಸಾಮಾಜಿಕ ಕಾರ್ಯಕರ್ತ ಖ್ಯಾತ ಉದ್ಯಮಿಯೂ ಆಗಿರುವ ಗುಲಾಂ ಮೊಯಿದೀನ್ ರವರಿಗೆ ಕೆನಡಾ ದಲ್ಲಿರುವ ಪ್ರಸಿದ್ಧ ಬ್ರೋಮ್ ಟಾಮ್ ಯುನಿವರ್ಸಿಟಿಯ ವತಿಯಿಂದ ಸಮಾಜ ಸೇವಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರಧಾನ ಮಾಡಲಾಯಿತು .



ಕೋಳೂರು ಚೆರಿಯಾಕ ಎಂದೇ ಪ್ರಸಿದ್ಧರಾಗಿರುವ ಇವರು ಹಲವಾರು ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿದ್ಫು ,ಹಲವಾರು ವಿದ್ಯಾರ್ಥಿಗಳ ಶಿಕ್ಷಣ ಪೂರೈಸಲು ನೆರವಾಗಿದ್ದಾರೆ .ಎಲ್ಲಾ ಜಾತಿ ಧರ್ಮೀಯರನ್ನು ಒಗ್ಗೊಡಿಸಿ ಪ್ರತಿ ವರ್ಷ ಸ್ನೇಹಮಿಲನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬರುತ್ತಿದ್ದು ,ಕೋರೋಣ ಸಂಧರ್ಭದಲ್ಲಿ 5000 ಕ್ಕಿಂತಲೂ ಹೆಚ್ಚು ಆಹಾರ ಕಿಟ್ ಗಳನ್ನು ತಮ್ಮ ವತಿಯಿಂದ ವಿತರಿಸಿದ್ದರು .
ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ ಸಮಾಜ ಸೇವೆಯನ್ನು ಗುರ್ತಿಸಿ ಸಂಸ್ಥೆಯವರೇ ತನ್ನನ್ನು ಆಯ್ಕೆ ಮಾಡಿದ್ದಾರೆ ಎಂದು ಡಾ :ಗುಲಾಂ ಮೊಯಿದೀನ್ ಅಭಿಪ್ರಾಯ ವ್ಯಕ್ತ ಪಡಿಸಿದ್ಫು .ಮುಂದೆಯೂ ಇನ್ನಷ್ಟು ಸಮಾಜ ಸೇವೆ ಮುಂದುವರೆಯಲಿದೆ ಎಂದು ಪತ್ರಿಕೆಗೆ ತಿಳಿಸಿದ್ದಾರೆ .