
ಉಳ್ಳಾಲ: ಕಪ್ಪೆ ಚಿಪ್ಪು ಹೆಕ್ಕಳು ತೆರಳಿದ್ದ ವಿವಾಹಿತರೊಬ್ಬರು ನದಿ ನೀರಿನಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಹರೇಕಳ ಬೈತಾರ್ ಸಮೀಪ ಇಂದು ಸಂಭವಿಸಿದೆ.



ಬೈತಾರ್ ನಿವಾಸಿ ವಿನೋದ್ ಗಟ್ಟಿ (40) ಸಾವನಪ್ಪಿದವರು. ಮನೆಯಿಂದ ಪಂಪವೆಲ್ ಕಡೆಗೆ ಕೆಲಸದ ಮೇಲೆ ತೆರಳಿದ್ದ ವಿನೋದ್ ಮಧ್ಯಾಹ್ನ ವೇಳೆ ವಾಪಾಸ್ಸಾಗಿದ್ದು, ಬಳಿಕ ನದಿ ನೀರಿಗೆ ಇಳಿದು ಕಪ್ಪೆ ಚಿಪ್ಪು ಹೆಕ್ಕಲು ತೆರಳಿದ್ದರು.
ಈ ವೇಳೆ ಕೆಸರಿನಲ್ಲಿ ಕಾಲು ಹೂತುಹೋಗಿದ್ದು, ಬಳಿಕ ನೀರಿನಿಂದ ಮೇಲೆಳಲು ಸಾಧ್ಯವಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ವಿವಾಹಿತರಾಗಿದ್ದು ಪತ್ನಿ ಪುತ್ರ ನನ್ನು ಅಗಲಿದ್ದಾರೆ.