October 23, 2025
WhatsApp Image 2025-02-10 at 9.50.44 AM

ಮಂಗಳೂರು: ಬರಕಾ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜಿನ ವಿದ್ಯಾರ್ಥಿನಿಯಿಂದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಾಧನೆ.

ನಗರದ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ & ಕಾಲೇಜಿನ 7ನೇ ತರಗತಿ ವಿದ್ಯಾರ್ಥಿನಿ ಫಾತಿಮಾ ಶಝಾರವರು, ತಮಿಳುನಾಡಿನ ಚೆನ್ನೈನಲ್ಲಿ ನಡೆದ ಒಂದೇ ಸ್ಥಳದಲ್ಲಿ ಕರಾಟೆ ವಿಭಾಗದ ಗುಂಪಿನಲ್ಲಿ 30 ನಿಮಿಷಗಳ ಕಾಲ ತಡೆರಹಿತ ಕಟಾ ಮಾಡಿ ಗಿನ್ನೆಸ್ ದಾಖಲೆ ಬರೆದಿದ್ದಾರೆ.
ಅದರ ಜೊತೆಗೆ ಕುಮಿಟೆ ವೈಯಕ್ತಿಕ ವಿಭಾಗದಲ್ಲೂ ಚಿನ್ನದ ಪದಕ ಪಡೆದಿರುತ್ತಾರೆ.

ಶ್ರೀಮತಿ ಸೌಸ್ರೀನ್ ಹಾಗೂ ಶ್ರೀ ಕಾಸಿಮ್ ದಂಪತಿಯ ಪುತ್ರಿಯಾಗಿರುವ ಈ ವಿದ್ಯಾರ್ಥಿನಿಯು ಖ್ಯಾತ ಕರಾಟೆ ತರಬೇತುದಾರೇರಾದ ಶ್ರೀಮತಿ ಝಕಿಯಾ ಯಾಸ್ಮೀನ್ ಮತ್ತು ಶ್ರೀ ನದೀಮ್ ರಿಂದ ಕರಾಟೆ ತರಬೇತು ಪಡೆಯುತ್ತಿದ್ದಾರೆ.

ಶಾಲಾ ಆಡಳಿತ ಮಂಡಳಿ, ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳ ಪರವಾಗಿ ಸಂಸ್ಥೆಯ ಅಧ್ಯಕ್ಷರಾದ ಮೊಹಮದ್ ಅಶ್ರಫ್ ಬಜ್ಪೆರವರು ವಿದ್ಯಾರ್ಥಿನಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುತ್ತಾರೆ.

About The Author

Leave a Reply