
ಮಂಗಳೂರು: ಕುಂಜತ್ತಬೈಲು ಬಸವನಗರದ ಬಾಡಿಗೆ ಮನೆಯಲ್ಲಿದ್ದ ಮಹಾದೇವಿ (ಕರಿಯಮ್ಮ – 25) ಮತ್ತು ಮಗಳು ಕಾವೇರಿ (4) ಮನೆಯಿಂದ ನಾಪತ್ತೆಯಾಗಿದ್ದಾರೆ.ಮಹಾದೇವಿಗೆ 7 ವರ್ಷದ ಹಿಂದೆ ಬಾಗಲಕೋಟೆ ಜಿಲ್ಲೆಯ ಕೆರೂರಿನ ಹಾಲಿಗೇರಿ ನಿವಾಸಿ ವೆಂಕಪ್ಪನೊಂದಿಗೆ ವಿವಾಹವಾಗಿತ್ತು.



2 ವರ್ಷದ ಹಿಂದೆ ಪತಿ-ಪತ್ನಿ ಮಧ್ಯೆ ವಿರಸ ತಲೆದೋರಿದ ಕಾರಣ ಕುಳಾಯಿಯಲ್ಲಿರುವ ಅಣ್ಣನ ಮನೆಗೆ ಬಂದು ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.ಫೆ. 2ರಂದು ರಾತ್ರಿ 10 ಗಂಟೆಗೆ ಅಲ್ಲಿ ಅತ್ತಿಗೆಯೊಂದಿಗೆ ಜಗಳವಾಗಿತ್ತು. ಬಳಿಕ ಆಕೆಯನ್ನು ಕುಂಜತ್ತಬೈಲಿನ ಬಸವ ನಗರದಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗಿತ್ತು. ಫೆ. 8ರಂದು ದೊಡ್ಡ ಮಗಳು ಕುಳಾಯ ಶಾಲೆಗೆ ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಣ್ಣ ಮಗಳೊಂದಿಗೆ ಮಹಾದೇವಿ ನಾಪತ್ತೆಯಾಗಿದ್ದಾರೆ.
ನೆರೆಮನೆಯವರಲ್ಲಿ ಪೇಟೆಗೆ ಹೋಗುವುದಾಗಿ ತಿಳಿಸಿದ್ದರೆನ್ನಲಾಗಿದೆ.ಮಹಾದೇವಿ 4.5 ಅಡಿ ಎತ್ತರ, ಗೋಧಿ ಬಣ್ಣ, ಸಾಧಾರ ಮೈಕಟ್ಟು, ಹಸುರು ಸೀರೆ ಮತ್ತು ಕಪ್ಪು ರವಿಕೆ ಧರಿಸಿದ್ದು, ಕನ್ನಡ ಬಲ್ಲವಳಾಗಿದ್ದಾರೆ. ಮಗು ಕಪ್ಪು ಮೈ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಹಸುರು ಬಣ್ಣದ ಫ್ರಾಕ್ ಧರಿಸಿದೆ.ಈ ಚಹರೆಯ ತಾಯಿ-ಮಗಳು ಕಂಡು ಬಂದಲ್ಲಿ ಕಾವೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.