February 1, 2026
WhatsApp Image 2025-02-15 at 10.37.45 AM

ಪುತ್ತೂರು : ಪುತ್ತೂರಿನ ನೂತನ ಸಹಾಯಕ ಕಮಿಷನ‌ರ್ ಆಗಿ ಕೆಎಎಸ್ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಕೆಎಎಸ್ ಅಧಿಕಾರಿ ಸ್ಟೆಲ್ಲಾ ವರ್ಗೀಸ್ ರವರನ್ನು ಪುತ್ತೂರು ಉಪವಿಭಾಗದ ಸಹಾಯಕ ಕಮಿಷನ‌ರ್ ಆಗಿ ನೇಮಕಗೊಳಿಸಿ ತಕ್ಷಣದಿಂದಲೇ ಆದೇಶಿಸಲಾಗಿದೆ.ಮೂಲತ ಕಲಬುರ್ಗಿಯವರಾದ ಸ್ಟೆಲ್ಲಾ ವರ್ಗೀಸ್ ರವರು ಬಿಎಸ್ ಸಿ ಪದವಿಧರೆಯಾಗಿದ್ದಾರೆ.

ಐಎಎಸ್ ಅಧಿಕಾರಿ ಜುಬಿನ್ ಮೊಹಪಾತ್ರ ಅವರ ವರ್ಗಾವಣೆಯಿಂದ ತೆರವಾಗಿರುವ ಸ್ಥಾನಕ್ಕೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಶ್ರವಣ್ ಕುಮಾ‌ರ್ ಆಗಮಿಸಿದ್ದರು. ಇದೀಗ ಕೆಎಎಸ್ ಶ್ರೇಣಿಯ ಅಧಿಕಾರಿಯನ್ನು ಸರ್ಕಾರ ನಿಯುಕ್ತಿಗೊಳಿಸಿದೆ.

About The Author

Leave a Reply