
ಬಂಟ್ವಾಳ : ನಿಯಂತ್ರಣ ತಪ್ಪಿದ ಆಟೋರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಚಾಲಕ ಸ್ಥಳದಲ್ಲಿಯೇ ಮೃತಪಟ್ಟು, ಪ್ರಯಾಣಿಕರಾಗಿದ್ದ ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ಅಮ್ಮುಂಜೆಯಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದಿದೆ.



ರಿಕ್ಷಾ ಚಾಲಕ ಅಮ್ಮುಂಜೆ ನಿವಾಸಿ ಮಹಾಬಲ ಪೂಜಾರಿ (37) ಮೃತಪಟ್ಟವರು. ಮಹಾಬಲ ಪೂಜಾರಿಯವರು ತಮ್ಮ ಸಂಬಂಧಿಗಳ ಮಕ್ಕಳನ್ನು ಮೂಡಬಿದರೆಯ ಮಿಜಾರು ಎಂಬಲ್ಲಿಗೆ ಗರಡಿ ಜಾತ್ರೆಗೆ ಕರೆದುಕೊಂಡು ಹೋಗಿದ್ದರು.
ಅಲ್ಲಿಂದ ವಾಪಸ್ ಮನೆಗೆ ಬರುವ ವೇಳೆ ಚಾಲಕ ಮಹಾಬಲ ಪೂಜಾರಿಯವರ ನಿಯಂತ್ರಣ ಕಳೆದಕೊಂಡ ಆಟೋರಿಕ್ಷಾ ತಲೆಕೆಳಗಾದ ಸ್ಥಿತಿಯಲ್ಲಿ ಚರಂಡಿಗೆ ಬಿದ್ದಿದೆ. ಪರಿಣಾಮ ಚಾಲಕ ರಿಕ್ಷಾದ ಅಡಿಯಲ್ಲಿ ಸಿಲುಕಿ ಸ್ಥಳದಲ್ಲಿಯೇ ಪ್ರಾಣಬಿಟ್ಟಿದ್ದಾರೆ.
ಉಳಿದಂತೆ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಉ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.