ರಾಜ್ಯದ ಶಾಲಾ-ಕಾಲೇಜುಗಳ ಬಳಿ ಬಾರ್ ನಿಷೇಧ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು: ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳ ಬಳಿಯಲ್ಲಿ ತೆರೆದಿರುವಂತ ಮಧ್ಯದಂಗಡಿಗಳಿಗೆ ಬ್ರೇಕ್ ಹಾಕಲಾಗಿದೆ. ಒಂದು ವೇಳೆ ತೆರೆದಿದ್ರೆ ಶೈಕ್ಷಣಿಕ ಸಂಸ್ಥೆಗಳಿಂದ ಅಬಕಾರಿ ಇಲಾಖೆಗೆ ದೂರು ನೀಡಲು ಸೂಚಿಸಿದೆ.

ಈ ಕುರಿತಂತೆ ಪ್ರೌಢ ಶಿಕ್ಷಣದ ನಿರ್ದೇಶಕರು ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಅದರಲ್ಲಿ  ಮಾನ್ಯ ಆಯುಕ್ತರು ಅಬಕಾರಿ ಇಲಾಖೆಯವರು ಸರ್ಕಾರಕ್ಕೆ ಬರೆದಿರುವ ತಮ್ಮ ಪತ್ರದಲ್ಲಿ ಉಪ ಕಾರ್ಯದರ್ಶಿಗಳು, ಜುವಿನೈಲ್ ಜಹೀ ಕಮಿಟಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ರವರು ದಿನಾಂಕ: 12.10.2023 ರಂದು ನಡೆಸಿರುವ ಸಭೆಯಲ್ಲಿ, ವುಸ್ತಾಪಿಸಿರುವ ಅಂಶಗಳಂತೆ ಎಂದಿದ್ದಾರೆ.

ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸುತ್ತಾ ಈ ಕುರಿತು ಅಬಕಾರಿ ಇಲಾಖೆಯಿಂದ ಕಮಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ ಎಂದು ಹೇಳಿದ್ದಾರೆ.

ವ್ಯಸನ ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿ ಕಾರ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಮತ್ತು ಅಬಕಾರಿ ಇಲಾಖೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಲಾಗಿದೆ ಎಂದಿದ್ದಾರೆ.

ಅದರಂತೆ ತಮ್ಮ ಜಿಲ್ಲಾ ವಾಪ್ತಿಯಲ್ಲಿ ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿದ್ದಾರೆ.

Leave a Reply