
ಮೈಸೂರು: ನಗರದಲ್ಲಿ ನಡೆದಿದ್ದಂತ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮೃತ ಚೇತನ್ ತನ್ನ ಇಬ್ಬರು ಮಕ್ಕಳಿಗೆ, ಪತ್ನಿಗೆ ವಿಷ ಉಣಿಸಿ ಹತ್ಯೆಗೈದು, ಆ ಬಳಿಕ ತಾನೂ ನೇಣಿಗೆ ಶರಣಾಗರಿವ ವಿಚಾರ ತನಿಖೆಯಲ್ಲಿ ಬಯಲಾಗಿದೆ.



ಚೇತನ್ ಹತ್ಯೆಗೂ ಮುನ್ನ ಅಮೇರಿಕಾದಲ್ಲಿರುವಂತ ತನ್ನ ಸಹೋದರ ಭರತ್ ಗೆ ಕರೆ ಮಾಡಿ, ತಾನೂ ಪತ್ನಿ, ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ್ದು, ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ತಿಳಿಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
ಅಂದಹಾಗೇ ಚೇನ್ ಮೊದಲು ಕುಟುಂಬಸ್ಥರಿಗೆ ವಿಷ ಉಣಿಸಿದ್ದಾರೆ. ಆದರೇ ಆಗಲೂ ಸಾಯದಿದ್ದಾಗ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾರೆ. ಆ ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ. ಈ ವಿಷಯವನ್ನು ಮೃತ ಚೇತನ್ ಸಹೋದರ ಭರತ್, ಚೇತನ್ ಪತ್ನಿಯ ತಾಯಿಗೆ ತಿಳಿಸಿದ್ದಾರೆ. ಅವರು ಅಪಾರ್ಮೆಂಟ್ ಬಳಿ ತೆರಳಿ ನೋಡುವ ವೇಳೆಗೆ ಈ ದುರಂತ ನಡೆದು ಹೋಗಿದೆ.
ಅಂದಹಾಗೇ ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಚೇತನ್ (45), ರೂಪಾಲಿ (43), ಪ್ರಿಯಂವದ ಮತ್ತು ಕುಶಾಲ್ (15) ಶವ ಪತ್ತೆಯಾಗಿತ್ತು. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಹಾಗೂ ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿತ್ತು. ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್ ಸಹ ಪತ್ತೆಯಾಗಿತ್ತು. ಈಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ