October 13, 2025
WhatsApp Image 2025-02-18 at 4.00.58 PM
ಉಡುಪಿ: ನಗರದ ಅಜ್ಜರಕಾಡು ಅಗ್ನಿಶಾಮಕ ದಳ ಠಾಣೆಯ ಸಮೀಪ ಸೋಮವಾರ ರಾತ್ರಿ ವೇಳೆ ಎರಡು ಬೈಕ್ ಗಳ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಸ್ಥಳೀಯರಾದ ಸ್ಯಾಮುಯೆಲ್‌ ಸದಾನಂದ ಕರ್ಕಡ(59) ಎಂದು ತಿಳಿದು ಬಂದಿದೆ.
ಅತಿ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.ಅಪಘಾತದಿಂದ ಎರಡು ಬೈಕ್ ಗಳು ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply