ಎಸ್ಸೆಸ್ಸೆಫ್ ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆ: ನೂತನ ಸಮಿತಿ ರಚನೆ

ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ SSF ಅಜ್ಜಿಕಟ್ಟೆ ಶಾಖೆಯ ವಾರ್ಷಿಕ ಮಹಾಸಭೆಯು ದಿನಾಂಕ 17/02/2025 ಸೋಮವಾರ ರಾತ್ರಿ 9:00 ಗಂಟೆಗೆ ಸರಿಯಾಗಿ ಅಧ್ಯಕ್ಷರಾಗಿ ಅಹ್ಮದ್ ಹಾಶಿಮಿ ಅಲ್ ಮದೀನಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವನ್ನು ಮುಹಮ್ಮದ್ ಸಖಾಫಿ ಅಲ್ ಹಿಕಮಿ ಉಸ್ತಾದರು ದುಆ ಮೂಲಕ ಧನ್ಯಗೊಳಿಸಿದರು. ನಂತರ ಪ್ರಧಾನ ಕಾರ್ಯದರ್ಶಿ ಹಾಶಿರ್ ಅಜ್ಜಿಕಟ್ಟೆ ಸ್ವಾಗತ ಭಾಷಣ ಮಾಡಿದರು. ಮುಹಮ್ಮದ್ ಸಖಾಫಿ ಉಸ್ತಾದ್ ಉದ್ಘಾಟನೆ ನೆರವೇರಿಸಿದರು. ವೀಕ್ಷಕರಾಗಿ ಪುತ್ತೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಫಾಝಿಲ್ ಬನ್ನೂರು, ಶಾಖಾ ಉಸ್ತುವಾರಿ ಶಾಹುಲ್ ಹಮೀದ್ ಬನ್ನೂರು, ಸೆಕ್ಟರ್ ಕೋಶಾಧಿಕಾರಿ ರಶೀದ್ ಹಿಮಮಿ ಸಖಾಫಿ ಮುಂತಾದವರು ಉಪಸ್ಥಿತರಿದ್ದರು. ಅವರ ಸಮ್ಮುಖದಲ್ಲಿ ವರದಿ ಲೆಕ್ಕ ಪತ್ರವನ್ನು ಮಂಡಿಸಲಾಯಿತು.

ಸರ್ವ ಸದಸ್ಯರ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ವೀಕ್ಷಕರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಅಬ್ದುಲ್ ಸಮದ್ ಕುರಿಯ, ಉಪಾಧ್ಯಕ್ಷರು ಮುಹಮ್ಮದ್ ಸಖಾಫಿ ಅಲ್ ಹಿಕಮಿ,ಪ್ರಧಾನ ಕಾರ್ಯದರ್ಶಿ ಅಹ್ಮದ್ ಹಾಶಿಮಿ ಅಲ್ ಮದೀನಿ, ಕೋಶಾಧಿಕಾರಿಯಾಗಿ ಉಮರುಲ್ ಫಾರೂಕ್ ಕುರಿಯರನ್ನು ಆಯ್ಕೆ ಮಾಡಲಾಯಿತು.

ಕ್ಯಾಂಪಸ್ ಕಾರ್ಯದರ್ಶಿ:- ಹಾಶಿರ್ ಅಜ್ಜಿಕಟ್ಟೆ, ದಅವಾ ಕಾರ್ಯದರ್ಶಿ:- ಮಹ್ಮದ್ ಕುರಿಯ,ಮಾದ್ಯಮ ಕಾರ್ಯದರ್ಶಿ:-ಅಬ್ದುಲ್ ರಹೀಂ ಕುರಿಯ ,ಕ್ಯೂಡಿ ಕಾರ್ಯದರ್ಶಿ:-ಅಬ್ದುಲ್ ಫತ್ತಾಹ್ ಕುರಿಯ,ಜಿಡಿ ಕಾರ್ಯದರ್ಶಿ:-ಅಜ್ಮಲ್ ಕುರಿಯ, ರೈನ್ ಬೋ ಕಾರ್ಯದರ್ಶಿ:-ನಜೀಬ್ಅನ್ವರ್ ಪರ್ಪುಂಜ ಯುನಿಟ್ ಕಾರ್ಯಕಾರಿ ಸದಸ್ಯರು.

ರಶೀದ್ ಹಿಮಮಿ ಸಖಾಫಿ, ಇಸಾಕ್ ಅಜ್ಜಿಕಟ್ಟೆ, ಸಾದಿಕ್ ಕುರಿಯ, ಅನಸ್ ಪರ್ಪುಂಜ, ಮುಬಶ್ಶಿರ್ ಕೋಟ್ರಾಸ್, ಮೂಸಾ ಅದ್ನಾನ್, ಅಫ್ನಾನ್, ಮಿಸ್ಹಲ್, ಹಾಶಿಂ ಅಜ್ಜಿಕಟ್ಟೆ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ನಾಯಕರಾದ ಇಲ್ಯಾಸ್ ಅಜ್ಜಿಕಟ್ಟೆ, ಅಬ್ದುಲ್ ಅಝೀಝ್ ಅಜ್ಜಿಕಟ್ಟೆ ಸಹಿತ ಹಲವಾರು ಎಸ್ ವೈ ಎಸ್ ಮತ್ತು ಕರ್ನಾಟಕ ಮುಸ್ಲಿಂ ಜಮಾಅತ್ ಅಜ್ಜಿಕಟ್ಟೆ ಶಾಖೆಯ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.

ಕೊನೆಗೆ ನೂತನ ಕಾರ್ಯದರ್ಶಿ ಅಹ್ಮದ್ ಹಾಶಿಮಿಯ ದನ್ಯವಾದದೊಂದಿಗೆ ಸ್ವಲಾತಿನೊಂದಿಗೆ ಕೊನೆಗೊಳಿಸಲಾಯಿತು

Leave a Reply