
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚೇತರಿಸಿಕೊಂಡಿದ್ದಾರೆ ಮತ್ತು ನಮ್ಮ ಬೆಳಗಾವಿ ವರದಿಗಾರನೊಂದಿಗೆ ಮಾತಾಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ದುಡ್ಡು ಮೂರ್ನಾಲ್ಕು ತಿಂಗಳುಗಳಿಂದ ಬಂದಿಲ್ಲವೆಂದು ರಾಜ್ಯದಾದ್ಯಂತ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವೆ ತಾನು ಕಾರು ಅಪಘಾತದಿಂದಾಗಿ ಒಂದು ತಿಂಗಳಿಗೂ ಹೆಚ್ಚು ಅವಧಿಗೆ ಆಸ್ಪತ್ರೆ ಮತ್ತು ಮನೆಯಲ್ಲೇ ಉಳಿಯುವಂತಾಗಿದ್ದರಿಂದ ಹಣ ವರ್ಗಾವಣೆ ವಿಳಂಬವಾಗಿರುವುದಕ್ಕೆ ಒಂದು ಕಾರಣವಾಗಿದೆ.



ತಾನು ಕಚೇರಿಯಲ್ಲಿದಿದ್ದರೆ ಹಣಕಾಸು ಇಲಾಖೆ ಮೇಲೆ ನಿರಂತರವಾಗಿ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತಿದ್ದೆ, ಗೃಹಲಕ್ಷ್ಮಿಯರು ಆತಂಕಪಡುವ ಅಗತ್ಯವಿಲ್ಲ, ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಹೋಗುತ್ತಿರುವೆ, ಎಂಟ್ಹತ್ತು ದಿನಗಳಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿಸುವುದಾಗಿ ಸಚಿವೆ ಹೇಳುತ್ತಾರೆ.