ಪತ್ನಿ ಮೇಲೆ ಪತಿಯಿಂದ ಹಲ್ಲೆ; ಪ್ರಕರಣ ದಾಖಲು

ಪುತ್ತೂರು : ಗೃಹಿಣಿಯೊಬ್ಬರ ಮೇಲೆ ಆಕೆಯ ಪತಿ ಹಾಗೂ ಇತರ ಮೂವರು ಸೇರಿಕೊಂಡು ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುವ ಪ್ರಕರಣ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೊಡಿಪ್ಪಾಡಿಯ ಎಚ್.ಅಮೀನಾ ಅವರು ಈ ಬಗ್ಗೆ ದೂರು ನೀಡಿದ್ದು, ತನ್ನ ಪತಿ ಕೆ.ಎಂ. ಅಬ್ದುಲ್ಲಾ, ಝಾರಾ, ಗಝಾಲಿ ಹಾಗೂ ರೈಸ ಎಂಬವರು ಹಲ್ಲೆ ನಡೆಸಿದ್ದಾರೆ. ಅಕ್ರಮವಾಗಿ ತನ್ನ ಮನೆಗೆ ಪ್ರವೇಶಿಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಮನೆಯ ಸಾಮಾನುಗಳನ್ನು ಬಿಸಾಡಿದ್ದಾರೆ. ಮನೆಯಿಂದ ಹೊರಗೆ ಹೋಗುವಂತೆ ಬೆದರಿಕೆ ಹಾಕಿದ್ದಾರೆ. ಮಾನಭಂಗಕ್ಕೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಮತ್ತೂ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ

Leave a Reply