October 13, 2025
DeWatermark.ai_1740485692989

ಉಡುಪಿ: ಮಲ್ಪೆ ಕರಾವಳಿಯಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದಲ್ಲಿರುವ ಸೇಂಟ್ ಮೇರಿಸ್ ದ್ವೀಪದ ಬಳಿ ವಿದೇಶಿ ಬೋಟನ್ನು ಕರಾವಳಿ ಕಾವಲು ಪೊಲೀಸ್ ಹಾಗೂ ಮಂಗಳೂರು ಕೋಸ್ಟ್ ಗಾರ್ಡ್ ವಶಕ್ಕೆ ಪಡೆದುಕೊಂಡಿದ್ದು, ಅದರಲ್ಲಿದ್ದ ಮೂವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಒಮನ್ ದೇಶದ ಮೀನುಗಾರಿಕೆ ದೋಣಿ ಎಂದು ಗುರುತಿಸಲಾದ ಈ ಬೋಟನ್ನು ಮೊದಲಿಗೆ ಸ್ಥಳೀಯ ಮೀನುಗಾರರು ಗಮನಿಸಿದ್ದು, ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ತಮಿಳುನಾಡಿನ ರಾಮನಾಥಪುರಂನ ಜೇಮ್ಸ್ ಫ್ರಾಂಕ್ಲಿನ್ ಮೋಸೆಸ್ (50) ತಿರುನಲ್ವೇಲಿಯ ರಾಬಿನ್‌ಸ್ಟನ್ (50) ಮತ್ತು ಡೆರೋಸ್ ಅಲ್ಫೋನ್ಸೋ (38) ಎಂದು ಗುರುತಿಸಲಾಗಿದೆ. 1920 ರ ಪಾಸ್ ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯ್ದೆಯ ಸೆಕ್ಷನ್ 3 ಮತ್ತು 1981 ರ ಭಾರತದ ಸಮುದ್ರ ವಲಯಗಳ ಕಾಯ್ದೆಯ ಸೆಕ್ಷನ್ 10, 11 ಮತ್ತು 12 ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು. ಮೀನುಗಾರರು ಫೆಬ್ರವರಿ 17 ರಂದು ಪೂರ್ವ ಒಮನ್‌ನ ಡುಕ್ಮ್ ಬಂದರಿನಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳೆಸಿದ್ದು, ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಸೇಂಟ್ ಮೇರಿಸ್ ದ್ವೀಪದ ಬಳಿ ತಡೆಹಿಡಿಯಲಾಗಿದೆ.

ಅವರ ಮಾಲೀಕರು ಪಾಸ್ ಪೋರ್ಟ್ ಕಿತ್ತುಕೊಂಡು, ವೇತನ, ಆಹಾರ ನೀಡದಿದ್ದಾಗ ಓಮನ್‌ನಿಂದ ಪಲಾಯನ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ ಎಂದು ಸಿಎಸ್ಪಿ ಅಧಿಕಾರಿಗಳು ತಿಳಿಸಿದ್ದಾರೆ. ಮೀನುಗಾರರು ಕೇವಲ ಮೂಲಭೂತ ಜಿಪಿಎಸ್ ಸಾಧನವನ್ನು ಬಳಸಿಕೊಂಡು ಅಪಾಯಕಾರಿ ಸಮುದ್ರ ಪ್ರಯಾಣವನ್ನು ಕೈಗೊಂಡಿದ್ದಾರೆ ಎಂದು ಕರಾವಳಿ ಭದ್ರತಾ ಪೊಲೀಸ್ ಅಧೀಕ್ಷಕ ಹೆಚ್.ಎನ್ ಮಿಥುನ್ ಹೇಳಿದ್ದಾರೆ. ಮೀನುಗಾರರು ಮಲ್ಪೆ ತಲುಪುವ ಮೊದಲು ಕಾರವಾರ ಕರಾವಳಿಯ ಮೂಲಕ ಸರಿಸುಮಾರು 3,000 ಕಿಮೀ ಕ್ರಮಿಸಿದ್ದಾರೆ. ಅವರ ಆಧಾರ್ ಮತ್ತು ಡಿಜಿಟಲ್ ದಾಖಲೆಗಳ ಪರಿಶೀಲನೆ ವೇಳೆ ಅವರ ಭಾರತೀಯ ರಾಷ್ಟ್ರೀಯತೆ ಮತ್ತು ಓಮನ್‌ನಲ್ಲಿ ಮೀನುಗಾರರಾಗಿ ಉದ್ಯೋಗ ಮಾಡುತ್ತಿದ್ದನ್ನು ಖಚಿತಪಡಿಸಿದೆ ಎಂದು ಅವರು ಹೇಳಿದರು.

About The Author

Leave a Reply