ಬಂಟ್ವಾಳ : ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಮಹಮ್ಮದ್ ಆಲಿ ನಿಧನ

ಬಂಟ್ವಾಳ: ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತ ಕೈಕಂಬ ಸಮೀಪದ ಶಾಂತಿ ಅಂಗಡಿ ನಿವಾಸಿ ಮಹಮ್ಮದ್ ಆಲಿ (72) ಅವರು ಅಲ್ಪಕಾಲದ ಅಸೌಖ್ಯದಿಂದ ಕೊನೆಯುಸಿರೆಳೆದರು.

ಸ್ನೇಹ ಜೀವಿಯಾಗಿದ್ದ ಇವರು ಹಲವಾರು ಸಾಮಾಜಿಕ ಕಾರ್ಯಗಳಿಗೆ ಮುನ್ನುಡಿ ಬರೆದಿದ್ದಾರೆ. ಕೈಕಂಬದ ಮೊಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷನಾಗಿ, ವಕ್ಪ್ ಬೋರ್ಡ್ ಸದಸ್ಯನಾಗಿ, ಮುಸ್ಲಿಂ ಯಂಗ್ ಮ್ಯಾನ್ ಸೊಸೈಟಿಯ ಸದಸ್ಯನಾಗಿ, ಜಮಿಹಯ್ಯತುಲ ಫಲಾಹ್ ಇದರ ಮಾಜಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಅವರು ಸಂತಾಪ ಸೂಚಿಸಿದ್ದಾರೆ.

Leave a Reply