January 16, 2026
WhatsApp Image 2025-05-02 at 9.08.44 AM

ಮಂಗಳೂರು ಹಳೆ ವಿಮಾನ ನಿಲ್ದಾಣದ ನಡುರಸ್ತೆಯಲ್ಲೇ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ (32) ಅವರನ್ನು ತಲವಾರಿನಿಂದ ಕಡಿದು ಬರ್ಬರ  ಹತ್ಯೆಗೈದಿದೆ.

 

 

ಕೊಲೆಯಾದ ಸುಹಾಸ್ ಶೆಟ್ಟಿ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಜಿಲ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ

ಸುಹಾಸ್‌ನ ಸ್ನೇಹಿತನ ಮೇಲೂ ತಂಡ ಕೊಲೆಗೆ ಯತ್ನ ನಡೆಸಿದೆ. ಈ ಘಟನೆ ರಾತ್ರಿ ಸುಮಾರು 8.30ರ ಹೊತ್ತಿಗೆ ನಡೆದಿದೆ. ಮಂಗಳೂರಿನಿಂದ ಬಜಪೆಯತ್ತ ಇನ್ನೋವಾ ಕಾರಿನಲ್ಲಿ ಸಾಗುತ್ತಿದ್ದ ಸುಹಾಸ್ ಮತ್ತು ಸ್ನೇಹಿತರನ್ನು ‘ವಾಹನದಲ್ಲಿ ಬೆನ್ನಟ್ಟಿ ಬಂದ ಐದಾರು ಮಂದಿಯ ತಂಡ ಕಿನ್ನಿಪದವಿನಲ್ಲಿ ಮತ್ತೊಂದು ಪಿಕಪ್ ವಾಹನದ ಮೂಲಕ ಅಡ್ಡಗಟ್ಟಿ ಸುಹಾಸ್ ಕೆಳಗೆ ಇಳಿಯುವುದನ್ನೇ ಕಾದು ತಲವಾರಿನಿಂದ ಮನಸೋ ಇಚ್ಛೆಹಲ್ಲಿ ನಡೆಸಿತು. ಸುಹಾಸ್ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.ಕೂಡಲೇ ಸುಹಾಸ್ ಅವರನ್ನು ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಈ ಘಟನೆ ಹಿನ್ನೆಲೆ ಯಲ್ಲಿ ಬಜಪೆ ಪೇಟೆಯ ಅಂಗಡಿ ಗಳನ್ನು ಮುಚ್ಚಿಸಲಾಯಿತು. ಗಾಯಗೊಂಡ ಸುಹಾಸ್ ಸ್ನೇಹಿತ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು,

ಸುಹಾಸ್ ಶೆಟ್ಟಿ ಬಂಟ್ವಾಳದ ತಾಲೂಕಿನ ಕಾವಳ ಮೂಡೂರು ಮೂಲದವರಾಗಿದ್ದು, ಬಜಪೆಯಲ್ಲಿ ನೆಲೆಸಿದ್ದರು. 2022ರಲ್ಲಿ ಸುರತ್ಕಲ್ ನಲ್ಲಿ ಹತ್ಯೆಗೀಡಾಗಿದ್ದ ಫಾಜಿಲ್ ಪ್ರಕರಣದ ಆರು ಆರೋಪಿಗಳಲ್ಲಿ ಒಬ್ಬರಾಗಿದ್ದರು. 2024ರ ಮಾ. 17ರಂದು ಇವರಿಗೆ ಜಾಮೀನು ಲಭಿಸಿತ್ತು.

ಸುಹಾಸ್ ಇನೋವಾ ಕಾರಿನಲ್ಲಿ ಸಹಚರರ ಜೊತೆ ತೆರಳುತ್ತಿದ್ದ ಸಂದರ್ಭದಲ್ಲಿ ಹೊಂಚು ಹಾಕಿದ್ದ ದುಷ್ಕರ್ಮಿಗಳು, ಗೂಡ್ಸ್ ವಾಹನದಲ್ಲಿ ಬಂದು ಸುಹಾಸ್ ತೆರಳುತ್ತಿದ್ದ ಕಾರಿಗೆ ಗುದ್ದಿದ್ದಾರೆ. ಗುದ್ದಿದ ರಭಸಕ್ಕೆ ಸುಹಾಸ್ ಇದ್ದ ಕಾರು ಸಲೂನ್ ಶಾಪ್‌ಗೆ ನುಗ್ಗಿದೆ. ಬಳಿಕ ನಡುರಸ್ತೆಯಲ್ಲೆ ಮಾರಕಾಸ್ತ್ರಗಳಿಂದ ಸುಹಾಸ್ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಸುಹಾಸ್ ಶೆಟ್ಟಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

 

 

ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಮಂಗಳೂರಿನಲ್ಲಿ ಸದ್ಯ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗುತ್ತದೆ. ಮೇಲ್ನೋಟಕ್ಕೆ ಇದು ಪ್ರತೀಕಾರಕ್ಕಾಗಿ ಮಾಡಿದ ಹತ್ಯೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮಂಗಳೂರಿನಲ್ಲಿ ನಾಕಾಬಂದಿ ಹಾಕಲಾಗಿದ್ದು ಆರೋಪಿಗಳು ಹೊರಹೋಗದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ. ನಗರದಲ್ಲಿ ರಾತ್ರಿಯಿಡೀ ಪೊಲೀಸ್ ಗಸ್ತು ತಿರುಗುವಂತೆ ಸೂಚನೆ ಕೊಡಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಸದ್ಯ ಘಟನೆ ಬಗ್ಗೆ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ ಎಂದು ಬಿಜೆಪಿ ಬೆಂಬಲಿಗರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದು ಮಂಗಳೂರು ಬಂದ್:  (ಮೇ 2) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

About The Author

Leave a Reply